ಬೆಂಗಳೂರಿನಲ್ಲಿ ವಿನೂತನ ಜಿಯೊಂಗಿ ಬಿಸಿನೆಸ್ ಸೆಂಟರ್ ಉದ್ಘಾಟನೆ.....!


ಬೆಂಗಳೂರು: ಭಾರತ ಮತ್ತು ಕೋರಿಯಾ ನಡುವೆ ಹೊಸ ಆರ್ಥಿಕ ಸಂಬಂಧಗಳ ವೃದ್ಧಿಯ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನೂತನವಾಗಿ ಜಿಯೊಂಗಿ ಬಿಸಿನೆಸ್ ಸೆಂಟರ್ (ಜಿಬಿಸಿ) ಉದ್ಘಾಟನೆ ಮಾಡಲಾಯಿತು. ಈ ಮೂಲಕ ವ್ಯಾಪಾರ ಪಾಲುದಾರಿಕೆ, ತಂತ್ರಜ್ಞಾನ ವಿನಿಮಯ ಮತ್ತು ಸಹಯೋಗ ಬೆಳೆಸುವ ಬದ್ಧತೆಯನ್ನು ಇದು ಹೊಸ ಮೈಲಿಗಲ್ಲಾಗಲಿದೆ.



ಈ ನೂತನ ವ್ಯಾಪಾರ ಕೇಂದ್ರವನ್ನ ಕರ್ನಾಟಕ ಸರ್ಕಾರದ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಕಾಂಗ್ ಸುಂಗ್-ಚಿಯೋನ್ ಉದ್ಘಾಟಿಸಿದರು. ಈ ವ್ಯಪಾರ ಕೇಂದ್ರವು ಮುಂದಿನ ದಿನಗಳಲ್ಲಿ ಆರ್ಥಿಕ ಸಂಬಂಧಗಳು, ವ್ಯಾಪಾರ, ಹೂಡಿಕೆ ಮತ್ತು ಮಾನವ ಸಂಪನ್ಮೂಲ ವಿನಿಮಯವನ್ನು ಜಾಗತಿಕವಾಗಿ ಸುಗಮಗೊಳಿಸುತ್ತದೆ. ಭಾರತದ ಅತಿದೊಡ್ಡ ಐಟಿ ಕ್ಲಸ್ಟರ್ ಎನಿಸಿಕೊಂಡಿರುವ ಬೆಂಗಳೂರು ಭರವಸೆಯ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ. 

GBC ಬೆಂಗಳೂರು ದಕ್ಷಿಣ ಭಾರತಕ್ಕೆ ವಿಸ್ತರಿಸುವ ಕಂಪನಿಗಳಿಗೆ ಗೇಟ್‌ವೇ ಆಗಿದ್ದು, ಹೊಸ ವ್ಯಾಪಾರ ಅವಕಾಶಗಳ ಮೇಲೆ ಕೇಂದ್ರೀಕರಿಸುತ್ತದೆ, ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹತೋಟಿಗೆ ತರುತ್ತದೆ ಮತ್ತು ಕೈಗಾರಿಕೆಗಳ ನಡುವಿನ ಸಹಯೋಗವನ್ನು ಉತ್ತೇಜಿಸುತ್ತದೆ. ಉದ್ಯಮ, ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು ಮತ್ತು 'ಮೇಕ್ ಇನ್ ಇಂಡಿಯಾ' ಗಾಗಿ ಕೊರಿಯನ್ SME ಗಳೊಂದಿಗಿನ ಪಾಲುದಾರಿಕೆಯು ಹೊಸ ಸಾಧ್ಯತೆಗೆ ಅವಕಾಶ ಮಾಡಿಕೊಡಲಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಗುಂಜನ್ ಕೃಷ್ಣ, ಈ ಬೆಳವಣಿಗೆಯು ಜಿಯೋಂಗಿ ಮತ್ತು ಕರ್ನಾಟಕದ ನಡುವಿನ ವ್ಯವಹಾರಗಳಿಗೆ ಹೊಸ ಸಾಧ್ಯತೆಯಾಗಲಿದೆ. ಕೋರಿಯನ್ ತಂತ್ರಜ್ಞಾನ, ಉತ್ಪನ್ನ ಮತ್ತು ವ್ಯಾಪಾರ ಹೋಡಿಕೆಗಳಿಗೆ ಜಿಬಿಸಿ ಅವಕಾಶ ಒದಗಿಸಿ ಕೊಡಲಿದೆ. ಈ ಕಾರ್ಯಕ್ರಮದಲ್ಲಿ ಎರಡು ದೇಶಗಳ ಮುಖ್ಯ ಅತಿಥಿಗಳ ಪಾಲ್ಗೊಳ್ಳುವಿಕೆಯು ವ್ಯಾಪಾರ ವೃದ್ಧಿ, ಆವಿಷ್ಕಾರ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಎಂದರು.



ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಕೆಬಿಐಜೆಡ್ ನ ನಿರಂತರ ಪ್ರಯತ್ನದ ಫಲವಾಗಿ ಜಿಯೋಂಗಿ ಬಿಸಿನೆಸ್ ಸೆಂಟರ್ ಬೆಂಗಳೂರಿನಲ್ಲಿ ಉದ್ಘಾಟನೆಯಾಗುವಲ್ಲಿ ಯಶ ಕಂಡಿದೆ. ಹಾಗೇ ಭವಿಷ್ಯದಲ್ಲಿ ಕೈಗಾರಿಕಾ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ವಿನೂತನ ಸಾಧ್ಯತೆಗಳು ತೆರೆದುಕೊಳ್ಳುವುದು ನಿಶ್ಚಯವಾಗಲಿದೆ.


ವೆವಿಯೊ ಗ್ಲೋಬಲ್ ಗ್ರೂಪ್‌ನ ಸಿಇಒ ಕ್ಯಾಲ್ವಿನ್ ಸೆಯುಂಗ್ವಾನ್ ಯಿ, MSME ಐಸಿಐಬಿ ಕನ್ವೆನರ್ ಹಿರೇನ್ ಮೋದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..


Comments