ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆ-ತಾಯಿನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ......

 

ಆಸ್ತಿ ವಿಚಾರವಾಗಿ ಮಗನೇ ಹೆತ್ತ ತಂದೆ-ತಾಯಿನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಘಟನೆ ಶನಿವಾರ ಸಂಜೆ ನಡೆದಿದೆ.

ರಾಮಕೃಷ್ಣಪ್ಪ (70), ಮುನಿರಾಮಕ್ಕ (65) ಹೆತ್ತ ಮಗನಿಂದಲೇ ಕೊಲೆಗೀಡಾದ ವೃದ್ಧ ದಂಪತಿ.

ಮಗ ನರಸಿಂಹಮೂರ್ತಿಯೇ ರಾಡ್ ನಿಂದ ಹೊಡೆದು ವೃದ್ಧ ದಂಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬರುತ್ತಿದೆ.

ಸದ್ಯ ಸೂಲಿಬೆಲೆ ಪೊಲೀಸರು ಮಗ ನರಸಿಂಹ ಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದಯವರಿಸಿದ್ದಾರೆ.

ಮಗ ನರಸಿಂಹಮೂರ್ತಿ ಮದುವೆಯಾದಗಲಿಂದಲೂ ತಂದೆ ತಾಯಿ ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ವೃದ್ಧ ದಂಪತಿಗೆ ಐದು ಮಂದಿ ಮಕ್ಕಳು ಅದರಲ್ಲಿ ನಾಲ್ಕು ಮಂದಿ ಹೆಣ್ಣು ಮಕ್ಕಳು, ಒಬ್ಬನೆ ಗಂಡು ಮಗ. ಐದು ಮಂದಿ ಮಕ್ಕಳಿಗೂ ಮದುವೆ ಮಾಡಿರುವ ವೃದ್ಧ ದಂಪತಿ. ಮಗ ತಂದೆ ತಾಯಿಯನ್ನ ಹೊರಗಿಟ್ಟಿದ್ದ ಎನ್ನಲಾಗಿದೆ.

ದಂಪತಿ ಹೆಣ್ಣು ಮಕ್ಕಳಿಗೆ ಇರುವ ಆಸ್ತಿಯಲ್ಲಿ ಪಾಲು ಕೊಡಲು ಮುಂದಾಗಿದಕ್ಕೆ ಪ್ರತಿದಿನ ಮಗ ನರಸಿಂಹ ಮೂರ್ತಿ ತನ್ನ ತಂದೆ ತಾಯಿ ಬಳಿ ಜಗಳವಾಡುತ್ತಿದ್ದ, ಶನಿವಾರದಂದು ಜಗಳ ತಾರಕಕ್ಕೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಹೆತ್ತ ತಂದೆ ತಾಯಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಳ್ಳದೇ ತನಗೆ ಏನು ತಿಳಿಯದ ಹಾಗೆ ಮನೆಯಲ್ಲಿಯೇ ಇದ್ದ ಪಾಪಿ ಪುತ್ರ.

ವೃದ್ಧ ದಂಪತಿಯು ಪ್ರತಿ ದಿ‌ನ ತನ್ನ ಹೆಣ್ಣುಮಕ್ಕಳಿಗೆ ಕರೆ ಮಾಡಿ ಮಾತಾಡುತ್ತಿದ್ದರು, ಅದರೆ ಶನಿವಾರದಿಂದ ಕರೆ ಮಾಡಿರಲಿಲ್ಲ , ಹೀಗಾಗಿ ಅನುಮಾನಗೊಂಡಿದ್ದ ಹೆಣ್ಣುಮಕ್ಕಳು.ಕೊನೆಯ ಮಗಳಾದ ಶಾಕುಂತಲ ಮನೆಗೆ ನೀಡಿದಾಗ ಮನೆ ಬಾಗಿಲಿಗೆ ಬೀಗ ಹಾಕಲಾಗಿತ್ತು , ತಕ್ಷಣ ತಂದೆ ತಾಯಿಗೆ ಕರೆ ಮಾಡಿದ್ದಾರೆ. ಆದರೆ ಇಬ್ಬರ ನಂಬರ್ ಸ್ವಿಚ್ ಆಫ್ ಅಗಿತ್ತು.

ಆತಂಕಗೊಂಡು ಸುಲಿಬೆಲೆಯಲ್ಲಿ ಇರುವ ತನ್ನು ಅಕ್ಕನ ಮನೆಗೆ ಹೋಗಿ ಮರಳಿ ತಂದೆ ತಾಯಿ ಮನೆಯ ಬಳಿ ಬಂದಿದ್ದರು.

ಈ ವೇಳೆ‌ ಮನೆಯ ಹೊರಗಿನ ಬಾತ್ ರೂಂ ಬೀಗ ಯಾರೋ ತೆರೆದಿರುವುದು ಗಮನಿಸಿದ್ದಾರೆ. ತಕ್ಷಣ ಮನೆಯ ಬಾಗಿಲನ್ನು ಹೊಡೆದು ಒಳಗೆ ಹೋಗಿದ್ದಾರೆ. ಬಾಗಿಲ ಬಳಿಯೇ ತಂದೆಯ ಮೃತ ದೇಹ ಮತ್ತು ಅಡುಗೆ ಮನೆಯ ಬಳಿ ತಾಯಿ ಮೃತ ದೇಹ ನೋಡಿ ಶಾಕ್ ಆಗಿದ್ದಾರೆ.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ‌‌ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Comments