ಚಿಕ್ಕಬಳ್ಳಾಪುರ: ಒಂದು ಕ್ಷಣದ ಮೈಮರೆವು ಎಂತಹ ಅನಾಹುತಕ್ಕು ಕಾರಣ ಆಗ್ತದೆ.. ನಾಲ್ಕು ಜನರಿದ್ದ ಕಾಲೇಜ್ ಯುವಕರ ಕಾರೊಂದು ಅತಿವೇಗದ ಪರಿಣಾಮ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ.. ಇದರಿಂದ ನಾಲ್ಕುಜನ ಕಾಲೇಜು ಯುವಕರು ಜಲಸಮಾದಿ ಆಗಿದ್ದಾರೆ.. ಅಷ್ಟಕ್ಕು ಈ ಘಟನೆ ನಡೆದಿರುವುದು ಎಲ್ಲಿ ಗೊತ್ತಾ..?
ರೇವಾ ವಿಶ್ವವಿದ್ಯಾಲಯಲ್ಲಿ ಪ್ರತಿಷ್ಠಿತ ಐಐಸಿ ಪ್ರಾದೇಶಿಕ ಸಭೆ- 2023 ....
ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈಪಾಸ್ಗೆ ಹೊಂದಿಕೊಂಡ ಅಮಾನಿ ಗೋಪಾಲಕೃಷ್ಣ ಕೆರೆ ನೀರಿಗೆ ಕಾರೊಂದು ಉರುಳಿಬಿದ್ದಿದೆ.
KA.03.MT 0761 ಸಂಖ್ಯೆಯ ವೋಕ್ಸ್ ವ್ಯಾಗನ್ ಪೋಲೊ ಕಾರು ಬೆಂಗಳೂರಿನಿಂದ ಬಾಗೇಪಲ್ಲಿ ಕಡೆಗೆ ಹೋಗ್ತಿತ್ತು.. ಈ ವೇಳೆ ದುರಂತ ನಡೆದಿದೆ. ಇನ್ನೂ ಹೆದ್ದಾರಿಯಲ್ಲಿ ಕಾರಿನ ಹಿಂದೆ ಸಂಚರಿಸುತ್ತಿದ್ದ ಆಂಬುಲೆನ್ಸ್ ಚಾಲಕನೋರ್ವ ಕಾರು ಉರುಳಿಬಿದ್ದಿನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.. ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಬಡಾವಣೆ ನಿವಾಸಿಗಳು, ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು, ಕಾರಿನಲ್ಲಿದ್ದವರನ್ನು ಹೊರಗೆ ತೆಗೆದಿದ್ದಾರೆ.. ಆದ್ರೆ ಅಷ್ಟೊತ್ತಿಗೆ ನಾಲ್ಕು ಜನ ಕಾರಿನಲ್ಲಿ ಮೃತಪಟ್ಟಿದ್ದರು. ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿ 21ವರ್ಷದ ಟ್ಯಾಗೂರು, ಚಿಕ್ಕಬಳ್ಳಾಪುರ ನಗರದ ಎಚ್.ಎಸ್. ಗಾರ್ಡನ್ ಬಡಾವಣೆಯ 21ವರ್ಷದ ವಸಂತ್, ಚಿಕ್ಕಬಳ್ಳಾಪುರ ಭಾರತಿ ಬಡಾವಣೆ ನಿವಾಸಿ 22 ವರ್ಷದ ಪವನ್ ಹಾಗೂ 22 ವರ್ಷದ ಆರ್ಯನ್ ಎಂದು ಗುರ್ತಿಸಲಾಗಿದೆ..
ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ.....!
ಕಾರು ಕೆರೆಗೆ ಬಿದ್ದ ದುರಂತದಲ್ಲಿ ಮೃತಪಟ್ಟರು ಬೆಂಗಳೂರಿನ ಯಲಹಂಕ ಸಮೀಪದ ರೇವಾ ಕಾಲೇಜ್ ವಿದ್ಯಾರ್ಥಿಗಳು ಎನ್ನಲಾಗಿದೆ.. ಪವನ್ ಅಜ್ಜಿ ಮನೆ ಚಿಕ್ಕಬಳ್ಳಾಪುರವಾಗಿದ್ದು ಅಜ್ಜಿ ಮನೆಗೆ ಬರುವಾಗ ಘಟನೆ ನಡೆದಿದೆ.ಇನ್ನೂ ಕಾರು ಪವನ್ ಗೆ ಸೇರಿದ್ದು, ಅದರ ಮಾಲಿಕತ್ವ ಬೆಂಗಳೂರಿನ ಕಾರ್ತಿಕ್ ಎನ್ನುವವರ ಹೆಸರಿನಲ್ಲಿದೆ.. ಇತ್ತಿಚಿಗೆ ಕಾರುವೀಮೆ ಲ್ಯಾಪ್ಸ್ ಆಗಿದೆ.. ನಾಲ್ಕು ಜನ ವಿದ್ಯಾರ್ಥಿಗಳು ಅತಿವೇಗವಾಗಿ ಕಾರು ಚಲಾಯಿಸಲು ಹೋಗಿ ಕೆರೆಗೆ ಬಿದ್ದಿರೊ ಸಾಧ್ಯತೆಯಿದೆ..
ಸದ್ಯಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.. ಮೃತ ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.. ಅದಕ್ಕೆ ಹೇಳೋದು ಅತಿವೇಗದ ಚಾಲನೆ ಅಪಾಯಕ್ಕೆ ಕಾರಣ ಅಂತ..
Comments