ಭ್ರೂಣಹತ್ಯೆ ಪ್ರಕರಣ 7ಜನರ.ಬಂಧನ ತನಿಖೆಯಲ್ಲಿ ಪೊಲೀಸರಿಗೆ ಸ್ಪೋಟಕ ಮಾಹಿತಿ .....!!

ಭ್ರೂಣ ಹತ್ಯೆ ಕೇಸ್ ಸಂಬಂಧಿಸಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಹೊರಬರರ್ತಿವೆ.. ರಾಜ್ಯದ ಮೊದಲ ಭ್ರೂಣ ಹತ್ಯೆ ಕೇಸ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿತ್ತು. ತಿರುಮಲಶೆಟ್ಟಿಹಳ್ಳಿಲಿ ಪತ್ತೆಯಾದ ಭ್ರೂಣ ಹತ್ಯೆ ಕೇಸಿನ ತನಿಖೆ ಜಾಡು ಹಿಡಿದಿರೋ ಪೊಲೀಸರಿಗೆ ಸ್ಪೋಟಕ ಮಾಹಿತಿ ಸಿಕ್ಕಿವೆ. ಇಂದು ಬೆಂಗಳೂರು ಗ್ರಾಮಾಂತರ ಫೊಲೀಸರು ಭ್ರೂಣ ಹತ್ಯೆ ಕೇಸಿನ  ಒಂದೊಂದೇ ಅಂಶಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ..


ಬ್ಯಾಲಕೆರೆ ಗ್ರಾಮದ ಕೆರೆಗೆ ಒಳಚರಂಡಿ ನೀರು ಬಿಟ್ಟು ಕೆರೆಪರಿಸರ ನಾಶ.....!!


ರಾಜ್ಯದ ಮಂಡ್ಯ-ಮೈಸೂರು ಜಿಲ್ಲೆಗಳ ಭ್ರೂಣ ಹತ್ಯೆ ಕೇಸ್ಗಳು ಪತ್ತೆಯಾಗಿ ಸಾಕಷ್ಟು ಸದ್ದು ಮಾಡಿದ್ದವು.. ನಂತರ ಬೆಂಗಳೂರು ಗ್ರಾ.ಜಿಲ್ಲೆ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಎಸ್.ಪಿ.ಜಿ ಆಸ್ಪತ್ರೆಯಲ್ಲಿ ಇದೇ ಡಿಸೆಂಬರ್ 13ರಂದು ಹತ್ಯೆ ಮಾಡಿದ್ದ ಭ್ರೂಣ ಪತ್ತೆಯಾಗಿತ್ತು. ಎಸ್.ಪಿ.ಜಿ ಆಸ್ಪತ್ರೆಯ ಮುಖ್ಯ ಆರೋಪಿ ಶ್ರೀನಿವಾಸ್ ಅಂದು  ನಾಪತ್ತೆಯಾಗಿ, 16ರಂದು ಪೊಲೀಸರಿಗೆ ಸಿಕ್ಕಿಬಿದ್ದು, 12ದಿನಗಳ ಕಾಲ‌ ಪೊಲೀಸರ ವಶದಲ್ಲಿರುತ್ತನೆ.. ಈ ಪ್ರಕರಣದಲ್ಲಿ ಇದುವರೆಗೂ ಒಟ್ಟು 7ಜನ ಆರೋಪಿಗಳನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು ಸ್ಪೋಟಕ‌ ಮಾಹಿತಿ ಹೊರಹಾಕಿದ್ದಾರೆ..ತಿಂಗಳಿಗೆ ಎರಡು ಮೂರರಂತೆ ಕಳೆದ ಅನೇಕ‌ ವರ್ಷಗಳಿಂದ ಚಾಳಿ ಮುಂದುವರೆದಿತ್ತು.. ಚಿಕ್ಕ ವಯಸ್ಸಿನ‌ ಹದಿಹರೆಯದವರು ತಪ್ಪುಮಾಡಿ ಪ್ರಗ್ನೆನ್ಸಿಯಾಗಿದ್ದರೆ, ಅಬಾರ್ಷನ್ ಮಾಡಿ ತಲಾ 5ರಿಂದ 50000 ವರೆಗೂ ಜನರ ಬಳಿ ಪೀಕುತ್ತಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಸ್ಪಷ್ಟಪಡಿಸಿದ್ದಾರೆ..



ಮುಖ್ಯವಾಗಿ ಎಸ್.ಪಿ.ಜಿ ಆಸ್ಪತ್ರೆಗೆ  ಹೊಸಕೋಟೆ, ವೈಲ್ಟ್ಪಿಲ್ಡ್, ಕೆ.ಆರ್.ಪುರ ಭಾಗದಿಂದ ಬರುವವರೇ ವೈದ್ಯರ ಟಾರ್ಗೆಟ್ ಆಗ್ತಿದ್ದರು.. ಭ್ರೂಣ ಹತ್ಯೆ ಕೇಸ್ ರೆಡ್ ಹ್ಯಾಂಡಾಗಿ ಸಿಕ್ಕಿದ ದಿನ ಆಸ್ಪತ್ರೆ ಮಾಲೀಕ ವೈದ್ಯ ಶ್ರೀನಿವಾಸ್ ಸೇರಿದಂತೆ ಐದು ಜನರ ಮೇಲೆ ಎಪ್.ಐ.ಆರ್ ದಾಖಲಾಗಿತ್ತು.. ನಾಲ್ವರು ನರ್ಸ್ಗಳನ್ನ ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಮುಖ ಆರೋಪಿ ಶ್ರೀನಿವಾಸ್ ಬಂಧನ ಚಾಲೆಂಜ್ ಆಗಿತ್ತು. ಮಾಲೂರಿನಿಂದ ಬಂಧಿಸಿ ಕರೆತಂದ ನಂತರ ಮತ್ತೊಬ್ಬ ಆರೋಪಿ ಲ್ಯಾಬ್ ಟೆಕ್ನೀಷಿಯನ್ ಭರತ್ ರನ್ನ  ಪೊಲೀಸರು ಬಂಧಿಸಿದ್ದಾರೆ.. ಇದೇ ತಿಂಗಳ 27ರ ವರೆಗೂ ಇಬ್ಬರು ಆರೋಪಿಗಳನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.. ಇದುವರೆಗೂ ಯಾರೆಲ್ಲಾ ಆಸ್ಪತ್ರೆಗೆ ವಿಸಿಟ್ ಮಾಡಿದ್ರು, ಯಾರು..!?ಯಾವ ಕಾರಣಕ್ಕೆ ಬಂದಿದ್ದರು..!? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಣ್ಣು ಭ್ರೂಣ ಪತ್ತೆಯಾದಾಗ, ಅದನ್ನ ಆಬಾರ್ಷನ್ ಮಾಡಲು ಬರುವವರನ್ನು ಪ್ರತ್ಯಕವಾಗಿ ಡೀಲ್ ಮಾಡಲು ಆಸ್ಪತ್ರೆಯಲ್ಲಿ ಬೇರೆ ನರ್ಸ್ಗಳಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ..


ಏರಪೋರ್ಟ್ ರಸ್ತೆ ಯಲ್ಲಿ ಸರಣಿ ಅಪಘಾತ ......!!!!


ಸದ್ಯ 7ಜನ ಆರೋಪಿಗಳನ್ನ ತಿರಮಲಶೆಟ್ಟಿ ಹಳ್ಳಿ ಪೊಲೀಸರು  ಬಂಧಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.. ಬಗೆದಷ್ಟು ಎಸ್.ಪಿ.ಜಿ ಆಸ್ಪತ್ರೆಯ ಭ್ರೂಣ ಹತ್ಯೆ ಕರ್ಮಕಾಂಡ ಬಯಲಾಗ್ತಲೇ ಇದೆ.. ಆಸ್ಪತ್ರೆ ಮಾಲೀಕ ಶ್ರೀನಿವಾಸ್ ಹಿಂದೆ ಇನ್ನು ಅನೇಕ ಜನ ಇದ್ದಾರೆ ಎಂಬ ಮಾಹಿತಿಯಿದೆ.. ಈ ಬಗ್ಗೆಯೂ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿ..  ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ..

Comments