ರೂಂನಲ್ಲಿ 3 ವರ್ಷದ ಮಗು ಲಾಕ್‌; ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಸಾಹಸ.....!!




ಮಂಗಳೂರು :  ಆಟವಾಡುತ್ತಾ ಮನೆಯ ಕೋಣೆಯಲ್ಲಿ ಸಿಲುಕಿದ್ದ 3 ವರ್ಷದ ಮಗುವನ್ನು ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳ ಸಿಬ್ಬಂದಿ (Child rescue) ರಕ್ಷಿಸಿದ್ದಾರೆ.


ನಿಂತಲ್ಲಿ ನಿಲ್ಲದೆ, ಅತ್ತಿಂದಿತ್ತ ಓಡಾಡುತ್ತಾ, ಕ್ಷಣಕೊಂದು ತುಂಟಾಟ ಮಾಡುವ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅದೇ ಮಕ್ಕಳ ತುಂಟಾಟವು ಒಮ್ಮೊಮ್ಮೆ ಪೋಷಕರಿಗೆ ಸಂಕಷ್ಟಕ್ಕೆ ಕಾರಣವಾಗುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಿಟ್ಟು ಜಾಗ್ರತೆ ವಹಿಸಿದರೂ ಸಾಲದು. ಕ್ಷಣ ಮಾತ್ರದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಸದ್ಯ ಅಪಾರ್ಟ್‌ಮೆಂಟ್‌ ರೂಂವೊಂದರಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ (Child rescue) ರಕ್ಷಿಸಿದ್ದಾರೆ.


ಕರ್ನಾಟಕChild rescue : ರೂಂನಲ್ಲಿ 3 ವರ್ಷದ ಮಗು ಲಾಕ್‌; ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಸಾಹಸ

Mangaluru News : ಆಟವಾಡುತ್ತಾ ಮನೆಯ ಕೋಣೆಯಲ್ಲಿ ಸಿಲುಕಿದ್ದ 3 ವರ್ಷದ ಮಗುವನ್ನು ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳ ಸಿಬ್ಬಂದಿ (Child rescue) ರಕ್ಷಿಸಿದ್ದಾರೆ.


VISTARANEWS.COM

48 mins ago on 26 December 2023, 12:20 PMBy Deepa S

Child rescued from door locked inside room

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ


FacebookTwitterWhatsAppPinterestTelegramLinkedInKoo

ಮಂಗಳೂರು: ನಿಂತಲ್ಲಿ ನಿಲ್ಲದೆ, ಅತ್ತಿಂದಿತ್ತ ಓಡಾಡುತ್ತಾ, ಕ್ಷಣಕೊಂದು ತುಂಟಾಟ ಮಾಡುವ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅದೇ ಮಕ್ಕಳ ತುಂಟಾಟವು ಒಮ್ಮೊಮ್ಮೆ ಪೋಷಕರಿಗೆ ಸಂಕಷ್ಟಕ್ಕೆ ಕಾರಣವಾಗುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಿಟ್ಟು ಜಾಗ್ರತೆ ವಹಿಸಿದರೂ ಸಾಲದು. ಕ್ಷಣ ಮಾತ್ರದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಸದ್ಯ ಅಪಾರ್ಟ್‌ಮೆಂಟ್‌ ರೂಂವೊಂದರಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ (Child rescue) ರಕ್ಷಿಸಿದ್ದಾರೆ.



ಮಂಗಳೂರಿನ ಕೊಡಿಯಾಲ್ ಗುತ್ತಿನ ಅಪಾಟ್೯ಮೆಂಟ್‌ನಲ್ಲಿ ಮಗುವೊಂದು ಆಟವಾಡುತ್ತಾ ಮನೆಯೊಳಗಿದ್ದ ರೂಮಿಗೆ ಹೋಗಿದೆ. ಈ ವೇಳೆ ಅಚಾನಕ್‌ ಆಗಿ ರೂಮಿನ ಡೋರ್‌ ಲಾಕ್‌ ಮಾಡಿಕೊಂಡಿದೆ. ವಾಪಸ್‌ ಡೋರ್‌ ಅನ್‌ ಲಾಕ್‌ ಮಾಡಲು ಆಗದೆ ಮಗು ಅಳಲು ಶುರು ಮಾಡಿತ್ತು. ಮಗು ಅಳುವಿನ ಸದ್ದು ಕೇಳಿ ಬಂದಿದ್ದ ಪೋಷಕರು ರೂಮಿನ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಆದರೆ ರೂಮಿನೊಳಗೆ ಮಗು ಡೋರ್‌ ಲಾಕ್‌ ಮಾಡಿಕೊಂಡಿತ್ತು.



ರೂಮಿನ ಡೋರ್‌ ಲಾಕ್‌ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗದಿದ್ದಾಗ ಗಾಬರಿಗೊಂಡ ಮನೆ ಮಂದಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ತಂಡದವರು ಹಗ್ಗದ ಸಹಾಯದಿಂದ 4ನೇ ಮಹಡಿಗೆ ಇಳಿದು, ಕೋಣೆಯೊಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ್ದಾರೆ.




Comments