ಡಿ.22 ರಿಂದ ಮೂರು ದಿನಗಳ ವೈದ್ಯರ ಕ್ರಿಕೆಟ್ ‌ಕ್ರೀಡಾಕೂಟ .45 ವರ್ಷ ಮೇಲ್ಪಟ್ಟ ವೈದ್ಯರಿಗಾಗಿಯೇ ವಿಶೇಷವಾಗಿ ಲೆಜೆಂಡ್ಸ್‌ ಕಪ್‌ ಆಯೋಜನೆ....!!

ಬೆಂಗಳೂರು: ಡಿ.22 ರಿಂದ ಮೂರು ದಿನಗಳ ಕಾಲ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಯಲಹಂಕ ಶಾಖೆಯ ವತಿಯಿಂದ ರಾಜ್ಯಮಟ್ಟದ ವೈದ್ಯರ ಕ್ರಿಕೆಟ್‌ ಟೂರ್ನಮೆಂಟ್‌ ಆಯೋಜಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೈದ್ಯರಿಗೆ ಸ್ಪೂರ್ತಿ ನೀಡಬೇಕು ಎಂದು ಯಲಹಂಕ ಐಎಂಎ ಅಧ್ಯಕ್ಷ ಡಾ.ಪವನ್‌ಕುಮಾರ್‌ ವಿನಂತಿಸಿದ್ದಾರೆ. 

ಯಲಹಂಕ ಮಾಧ್ಯಮಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಿ.22 ರಿಂದ 24 ರವರೆಗೆ ಯಲಹಂಕ ಸುತ್ತಲಿನ ಹತ್ತು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 40 ಕ್ಕೂ ಹೆಚ್ಚು ವೈದ್ಯರ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು ಗಂಡುಮೆಟ್ಟಿದ ನಾಡು, ಕೆಂಪೇಗೌಡರ ತವರಲ್ಲಿ ಕ್ರೀಡಾಕೂಟ ಆಯೋಜಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದರು. 

ಸಂಘಟನಾ ಸಮಿತಿ ಅಧ್ಯಕ್ಷ ಡಾ.ಶಂಕರ್‌ ನಾರಾಯಣ್‌ ಮಾತನಾಡಿ ಡಿ.22 ರ ಬೆಳಗ್ಗೆ 7 ಗಂಟೆಗೆ  ಎಲ್ಲಾ ಹತ್ತು ಕ್ರೀಡಾಗಂಣದಲ್ಲಿ ಏಕಕಾಲಕ್ಕೆ  ಚಾಲನೆ ದೊರೆಯಲಿದ್ದು ದಿನಂ ಪ್ರತಿ 40  ಪಂದ್ಯಗಳಂತೆ ಎರಡು ದಿನಗಳ ಕಾಲ ಲೀಗ್‌  ಹಂತದ ಪಂದ್ಯಗಳು ನಡೆಯಲಿದ್ದು ಡಿ.24 ರ ಭಾನುವಾರ ಅಂತಿಮ ಪಂದ್ಯ ತಣಿಸಂದ್ರ ಸಂಪ್ರಸಿದ್ಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಾಮಾರೋಪ ಸಮಾರಂಭಕ್ಕೆ ಹಿರಿಯ ಕ್ರಿಕೇಟಿಗ ಸೈಯ್ಯದ್‌ ಕಿರ್ಮಾನಿ ಹಾಗೂ ಐಎಂಎ ರಾಜ್ಯಾಧ್ಯಕ್ಷ ಡಾ.ಶ್ರೀನಿವಾಸ್‌ರವರು ಆಗಮಿಸುತ್ತಿದ್ದು ನಮ್ಮಲ್ಲರ ಸಂತಸ ಹೆಚ್ಚಿದೆ ಎಂದರು. 

 45 ವರ್ಷ ಮೇಲ್ಪಟ್ಟ ವೈದ್ಯರಿಗಾಗಿಯೇ ವಿಶೇಷವಾಗಿ ಲೆಜೆಂಡ್ಸ್‌ ಕಪ್‌ ಆಯೋಜಿಸಲಾಗುತ್ತಿದ್ದು ಸುಮಾರು ೬ ಹಿರಿಯ ವೈದ್ಯರ ತಂಡಗಳೂ ಕೂಡ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಕೋವಿಡ್‌ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ವಹಿಸಿಯೇ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ ಎಂದರು. 

ಐಎಂಎ ಪೂರ್ವಾಧ್ಯಕ್ಷ ಡಾ.ವೈ.ಎಂ.ವೆಂಕಟೇಶ್‌, ಈವೆಂಟ್‌ ಮ್ಯಾನೇಜರ್‌ ಪ್ರಹ್ಲಾದ್‌, ಪಿಆರ್‌ಓ ಮೊಹಮ್ಮದ್‌ ರಫೀ ಉಪಸ್ಥಿತಿರಿದ್ದರು.

Comments