ಸಾಲಕ್ಕೆ ಹೆದರಿ ಡೆತ್‌ ನೋಟ್‌ ಬರೆದಿಟ್ಟು ಒಂದೇ ಕುಟುಂಬದ ಐದು ಜನ ಆತ್ಮಹತ್ಯೆ, ಗೃಹ ಸಚಿವರಿಗೆ ಮನವಿ....!

 


ತುಮಕೂರು: ಸಾಲಕ್ಕೆ ಹೆದರಿ ಕಿರುಕುಳ ತಾಳಲಾರದೇ ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಗೃಹ ಸಚಿವ ಡಾ. ಪರಮೇಶ್ವರ ಅವರಿಗೆ ಮನವಿ ಮಾಡಿಕೊಂಡಿದ್ದು, ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಇಲ್ಲಿನ ಸದಾಶಿವ ನಗರ ಸಮೀಪದ ಮೆಳೆಕೋಟೆ ಗರೀಬ್ ಸಾಬ್ (32), ಪತ್ನಿ ಸುಮಯ್ಯ(30), ಮಗಳು ಹಾಜೀರಾ (14), ಗಂಡು ಮಕ್ಕಳಾದ ಮೊಹಮ್ಮದ್ ಸುಭಾನ್ (10) ಮೊಹಮ್ಮದ್ ಮುನೀರ್ (10) ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮೂವರು ಮಕ್ಕಳಿಗೆ ದಂಪತಿ ವಿಷ ಉಣಿಸಿ, ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:ದೊಡ್ಡಬಳ್ಳಾಪುರ ತಾಲೂಕಿನ ಕುಮಾರಿ ಜಾನ್ಹವಿ ಎಂ ಆರ್ ರವರಿಗೆ ರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ...!




ಪುತ್ರನ ಹೆಸರಿನ ಟ್ರಸ್ಟ್​ಗೆ ನಿವೇಶನ ಮಂಜೂರು ಮಾಡುವಂತೆ ಗದಗ ಜಿಲ್ಲಾಧಿಕಾರಿಗೆ ಸಿದ್ದರಾಮಯ್ಯ ತಾಕೀತು.....!


ಡೆತ್ ನೋಟ್ ತಮ್ಮ ಸಾವಿಗೆ ಐದು ಮಂದಿ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ. ಜತೆಗೆ ಸೆಲ್ಫಿ ವಿಡಿಯೋವನ್ನು ಮಾಡಿಟ್ಟು ತಮ್ಮ ಮೃತ ದೇಹಗಳನ್ನು ಯಾವುದೇ ಪರೀಕ್ಷೆ ಮಾಡದಂತೆ ಉಲ್ಲೇಖ ಮಾಡಿದ್ದಾರೆ.


ಡೆತ್‌ ನೋಟ್‌ ನ ಸಾರಾಂಶ ಹೀಗಿದೆ: ದೊಡ್ಡಮ್ಮನಿಗೆ ನಮಸ್ಕಾರಗಳು, ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರ್ತಿಲ್ಲ. ಹೀಗಾಗಿ ಸಂಸಾರ ಮಾಡೋದು ಕಷ್ಟವಾಗಿದೆ. ಊಟ ಮಾಡೋಕು ಕಷ್ಟ ಆಗಿದೆ. ಊರಲ್ಲಿದ್ದಾಗ ಹೆಂಡತಿ ಅಣ್ಣ , ಹೆಂಡತಿ ತಂಗಿ ನಮ್ಮ ಮೇಲೆ ವಿಷ ಕಾರಿದ್ರು. ಅದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ.
ಇಲ್ಲಿ ಸಾಲ ಕಟ್ಟೋದು ಹೆಚ್ಚಾಗಿದೆ. ಬಾಡಿಗೆ ಮನೆಗೆ ನಲವತ್ತೈದು ಸಾವಿರ ಅಡ್ವಾನ್ಸ್ ಕೊಟ್ಟಿದ್ದೀವಿ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಸ್ ಕೊಡಿ. ಮನೆ ವಸ್ತುಗಳನ್ನು ನೀವು ತೆಗೆದುಕೊಂಡು ಹೋಗಿ.
ಹದಿನೈದು ಸಾವಿರಾನ ಜರಿನಾ ಆಂಟಿಗೆ ಕೊಡಿ. ನಮ್ಮ ಬೈಕ್ ನಮ್ಮ ಹಿರಿಯಣ್ಣ ಅಜಾಜ್ ಗೆ ಕೊಡಿ. ಅತ್ತಿಗೆ ಪರ್ವೀನ್ ಮತ್ತು ಅಣ್ಣನಿಗೆ ಫೋನ್ ಕೊಡಿ.
ದೊಡ್ಡಮ್ಮ ಬೇಕಾದ ವಸ್ತುಗಳನ್ನ ಇಟ್ಟುಕೊಳ್ಳಬಹುದು ಅಥವಾ ಮಾರಿಕೊಳ್ಳಬಹುದು. ತುಂಬಾ ವಿಷಯ ಇದೆ, ಆದ್ರೆ ಇದ್ರಲ್ಲಿ ಬರೆಯೋಕಾಗಲ್ಲ. ಈ ಪತ್ರವನ್ನ ಪೊಲೀಸರಿಗೆ ತೋರಿಸಿ. ಮತ್ತರ್ ಮಾಮನಿಗೆ ಕೊನೆ ನಮಸ್ಕಾರಗಳು.
ನಮಗೆ ಊಟ, ಅಕ್ಕಿ ಕೊಟ್ಟಿದ್ದೀರಾ, ಅದಕ್ಕೆ ನಿಮಗೆ ಮೆಳೇಕೋಟೆಯಲ್ಲಿರೋ ಅಂಗಡಿಯಲ್ಲಿರೋ ಸಾಮಾನುಗಳು, ಮತ್ತೆ ಅದರಲ್ಲಿ ಐದು ಸಾವಿರ ಇಟ್ಟಿದ್ದೀವಿ.
ಒಂದು ತಿಂಗಳು ಬಾಡಿಗೆ 2000 ರೂಪಾಯಿ ಕೊಡಬೇಕು. ಸದಾಶಿವನಗರದ ಮೂರನೇ ಬಿ ಮುಖ್ಯ ರಸ್ತೆಯಲ್ಲಿರುವ, ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದೀರಾ. ನಮಗೆ ಯಾರಾದ್ರೂ ಸಹಾಯ ಮಾಡಿದ್ರೆ ಅವರಿಗೆ ಇಲ್ಲಸಲ್ಲದನ್ನ ಹೇಳ್ತಿದ್ರು. ನಾವು ಅವರು ಹೇಳಿದಂತೆ ಕೇಳಬೇಕಿತ್ತು, ಇಲ್ಲವಾದ್ರೆ ಅವರು ನಮ್ಮ ಜತೆ ಜಗಳ ಮಾಡ್ತಿದ್ರು. ಶಬಾನಾ ನಮಗೆ ಏಳು ತಿಂಗಳ ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ನಮ್ಮ ಮೇಲೆ ವಿಷ ಕಾರುತ್ತಿದ್ದಾಳೆ. ನಮ್ಮ ಸಾವಿಗೆ ಐದು ಜನರೇ ಕಾರಣವಾಗಿದ್ದಾರೆ ಎಂದು ಡೆತ್‌ ನೋಟ್‌ ನಲ್ಲಿ ಉಲ್ಲೇಖ ಮಾಡಿದ್ದಾರೆ.
ನಮ್ಮ ಸಾವಿಗೆ ಗೃಹ ಮಂತ್ರಿ ಸರ್ ಕಾನೂನು ರೀತಿ ಶಿಕ್ಷೆ ಕೊಡಬೇಕು ಎಂದು ಬೇಡಿಕೊಳ್ತೀನಿ. ಇವರ ಕಾಟಕ್ಕೆ ನಮ್ಮ ಪ್ರಾಣ ಕೊಟ್ಟಿದ್ದೇವೆ. ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ಕೊತ್ತೀವಿ. ನಮ್ಮ ದೇಹವನ್ನ ಪೋಸ್ಟ್ ಮಾರ್ಟಮ್ ಮಾಡಬಾರದು. ಇನ್ನೂ ವಿಷಯ ಫೋನ್ ನಲ್ಲಿದೆ ಎಂದು ಡೆತ್ ನೋಟ್ ಬರೆದು ಐವರು ಸಹಿ ಹಾಕಿದ್ದಾರೆ.


Comments