ವೇಗವಾಗಿ ಬಂದ ಬಸ್ ಬೆನ್ಜ್ ಕಾರಿಗೆ ಗುದ್ದಿದೆ, ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಒಪನ್ ಆಗಿ ದಂಪತಿಗಳು ಪ್ರಾಣಪಾಯದಿಂದ ಪಾರು




 ನೆಲಮಂಗಲ : ಯೂಟರ್ನ್ ಸ್ಥಳದಲ್ಲಿ ಬೆನ್ಜ್ ಕಾರು ಏಕಾಏಕಿ ರಸ್ತೆಗೆ ನುಗಿದ್ದೆ, ವೇಗವಾಗಿ ಬಂದ ಬಸ್ ಬೆನ್ಜ್ ಕಾರಿಗೆ ಗುದ್ದಿದೆ, ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ಒಪನ್ ಆಗಿ ದಂಪತಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ, ನಿಯಂತ್ರಣ ತಪ್ಪಿದ ಬಸ್ ಸ್ವಲ್ಪ ಮುಂದೇ ಚಲಿಸಿದ್ರು 15 ಆಡಿಗಳ ಕಂದಕಕ್ಕೆ ಉರುಳುತ್ತಿತ್ತು. ಈ ಅಪಘಾತದ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. 


ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಬೇಗೂರಿನ ಪಾಕಶಾಲ ಹೋಟೆಲ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಹೊಟೇಲ್ ನಲ್ಲಿ ಊಟ ಮಾಡಿದ ದಂಪತಿ ಯೂಟರ್ನ್ ನಲ್ಲಿ ಏಕಾಏಕಿ ನುಗಿದ್ದಾರೆ ಈ ವೇಳೆ ತುಮಕೂರಿನಿಂದ ಬೆಂಗಳೂರು ಕಡೇಗೆ ಬರುತ್ತಿದ್ದ ಬಸ್ ಬೆನ್ಜ್ ಕಾರಿಗೆ ಗುದ್ದಿದೆ, ಕಾರಿನಲ್ಲಿ ಪೀಣ್ಯಾದ HHV ಕಂಪನಿ ಮಾಲೀಕರಾದ ಶ್ರೀಧರ್ ಮತ್ತು ಪತ್ನಿ ರಾಜೇಶ್ವರಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ, ಶ್ರೀಧರ್ ರವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. 

 ನಿಯಂತ್ರಣ ತಪ್ಪಿದ ಬಸ್ ರಸ್ತೆಯ ಬದಿಯ ಕಂದಕದ ಬಳಿ ಬಂತು ನಿಂತಿದೆ, ಸಲ್ಪ ಮುಂದೇ ಚಲಿಸಿದ್ರು ಬಸ್ 15 ಆಡಿಗಳ ಕಂದಕಕ್ಕೆ ಉರುಳುತ್ತಿತ್ತು. ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗದೆ ಪಾರಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಜಗದೀಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments