ಬಿಷಪ್ ಕಾಟನ್ ಕಾಲೇಜಿನಲ್ಲಿ ಕನ್ನಡ ಜನಪದ ಹಬ್ಬ...ಜಾನಪದ ಕಲಾತಂಡಗಳ ಸದ್ದಿಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು...!!
ಯಲಹಂಕದ ಬಿಷಪ್ ಕಾಟನ್ ಕಾಲೇಜಿನಲ್ಲಿ ಕನ್ನಡ ಜನಪದ ಹಬ್ಬ ಕಾರ್ಯ ಕ್ರಮ ಅದ್ದೂರಿಯಾಗಿ ನೇರವೇರಿತು ಕಳೆದೆರಡು ಮೂರು ವರ್ಷಗಳಿಂದ ಬಿಷಪ್ ಕಾಟನ್ ಶಾಲೆ ಆಡಳಿತ ಮಂಡಳಿ ನವೆಂಬರ್ ತಿಂಗಳಿನಲ್ಲಿ ಕನ್ನಡ ಜನಪದ ಹಬ್ಬ ನಡೆಸಿಕೊಂಡು ಬರುತ್ತಿದೆ ಕನ್ನಡ ಜನಪದ ಹಬ್ಬದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಸ್ಪರ್ಧೆಗಳು,ರಂಗೋಲಿ ಸ್ಪರ್ಧೆ,ಚರ್ಚಾಸ್ಪರ್ದೆ,ಏರ್ಪಡಿಸಲಾಗಿತ್ತು ವಿವಿಧ ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ, ಪಟ್ಟದ ಕುಣಿತ,ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಲಾಗಿತ್ತು.
ಬೆಂಗಳೂರಿನ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಜಾನಪದ ಕಲಾ ತಂಡಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು
ಕಾಲೇಜಿನಪ್ರಾಂಶುಪಾಲರಾದ ಪ್ರವೀಣ್ ಕುಮಾರ್ ಮಾತನಾಡಿ ನಮ್ಮ ನೆಲ ಜಲ ಭಾಷೆ ಉಳಿವಿಗಾಗಿ ನಮ್ಮ ನಾಡಿನ ಕಲೆ ಸಂಸ್ಕೃತಿ ಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ತೋರಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಆದ್ದರಿಂದ ಪ್ರತಿ ವರ್ಷ ನಾವು ಕನ್ನಡ ಜನಪದ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು
Comments