ಮದುವೆಯಾದ ಬೆನ್ನಲ್ಲೇ ಫಸ್ಟ್ ನೈಟ್ ಫೋಟೋ ಲೀಕ್ ಮಾಡಿದ್ರಾ ನಟ ಪ್ರಥಮ್! ಈಗ ಎಲ್ಲೆಡೆ ಇದೆ ಸುದ್ದಿ, ನೋಡಿ!!

 


ಕಳೆದ ಕೆಲವು ದಿನಗಳ ಹಿಂದಷ್ಟೇ ಬಹಳ ಸಿಂಪಲ್ ಆಗಿ ಮಂಡ್ಯ ಮೂಲಕ ಹುಡುಗಿಯೊಂದಿಗೆ ಪಕ್ಕ ಅರೆಂಜ್ ಮ್ಯಾರೇಜ್ ಆದಂತಹ ಮಾಜಿ ಬಿಗ್ ಬಾಸ್ (Big Boss) ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ (Pratham) ಅವರ ಮದುವೆ ಫೋಟೋಗಳು ವೈರಲ್ ಆಗುತ್ತಾ ಅಭಿಮಾನಿಗಳ ಮನಸ್ಸನ್ನು ಸೆಳೆದಿತ್ತು. ಹೀಗೆ ಮದುವೆಯಾಗಿ ಹೆಂಡತಿಯೊಂದಿಗೆ ಹನಿಮೂನ್ ಎಂದು ಸುಂದರವಾದ ಪ್ರದೇಶಗಳಿಗೆ ಹೋಗಿ ಎಂಜಾಯ್ ಮಾಡಬೇಕಿದ್ದಂತಹ ಪ್ರಥಮ್ ಶೂಟಿಂಗ್ ಕೆಲಸಕ್ಕೆ ವಾಪಸ್ ಆಗಿದ್ದಾರೆ.

ಹೌದು ಗೆಳೆಯರೇ ನಿನ್ನೆ ಪ್ರಥಮ್ ತಮ್ಮ ಫಸ್ಟ್ ನೈಟ್ ವಿತ್ ದೆವ್ವ(First night with devva) ಶೂಟಿಂಗ್ ಸೆಟ್ಟಿಗೆ ಮರಳಿದ್ದು, ಸ್ಟಾರ್ ನಟಿಯೊಂದಿಗೆ ಹಾಸಿಗೆಯ ಮೇಲೆ ಕುಳಿತು ಫಸ್ಟ್ ನೈಟ್ ಸೀನ್ ಶೂಟಿಂಗ್ ಕೆಲಸಗಳಲ್ಲಿ ಬಾಗಿಯಾಗಿರುವ ಕೆಲ ಚಿತ್ರಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿರಂತರ ಚಿತ್ರೀಕರಣದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳಗಾಗುತ್ತಿದ್ದು.


ಶಾಲೆಗೆ ರಜೆ ಸಿಗಲಿ ಎಂದು ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ: ಪೊಲೀಸ್ ತನಿಖೆ ವೇಳೆ ಕೃತ್ಯ ಬಯಲು...!


ಫೋಟೋ ನೋಡಿದಂತಹ ಕೆಲವರು ಈಗಷ್ಟೇ ಮದುವೆ ಆಗಿರುವಂತಹ ಭಾನುಶ್ರೀ (Banushree) ಅವರ ಜೊತೆಗಿನ ಫಸ್ಟ್ ನೈಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆನೋ ಎಂದು ತಪ್ಪಾಗಿ ಅರ್ಥೈಸಿಕೊಂಡರು. ಆನಂತರ ಅಸಲಿ ಮಾಹಿತಿ ತಿಳಿದು ಭಿನ್ನವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಪ್ರಥಮ್ ಅವರ ಕಾಲೆಳೆದಿದ್ದಾರೆ. ಹೌದು ಗೆಳೆಯರೇ ಹಾಸಿಗೆಯ ಮೇಲೆ ಬಿಳಿ ಬಣ್ಣದ ಬೆಡ್ ಶೀಟ್ ಅನ್ನು ಹೊದ್ದುಕೊಂಡು ಫಸ್ಟ್ ನೈಟ್ ವಿಥ್ ದೆವ್ವ ಸಿನಿಮಾದ ನಟಿ ಹಾಗೂ ಪ್ರಥಮ್ ಅವರು ಬಹಳ ಬೋಲ್ಡ್ ಅವತಾರದಲ್ಲಿ ಕುಳಿತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.


ದೊಡ್ಡಬಳ್ಳಾಪುರದ ಫಿಲ್ಮ್ ಸಿಟಿ, "ಫೋಟೋ" ಕಿರುಚಿತ್ರದ ಮಹೂರ್ತ (ಸ್ಕ್ರಿಪ್ಟ್ ಹಾಗೂ ಪೋಸ್ಟರ್ ರಿವಿಲ್)...!


ಈ ಫೋಟೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ನಿಮ್ಮ ಈ ಫೋಟೋಗಳನ್ನು ನೋಡಿದರೆ ಬರ್ತಾ ಬರ್ತಾ ಒಳ್ಳೆ ಹುಡುಗ ಪ್ರಥಮ್ ಪೋಲಿ ಪ್ರಥಮ್ ಆಗುತ್ತಿದ್ದಾನೆ, ದೆವ್ವದ ಜೊತೆಗೆ ಫಸ್ಟ್ ನೈಟಾ? ಎಂದೆಲ್ಲ ತಮಾಷೆಯಾಗಿ ಕಮೆಂಟ್ ಮಾಡುತ್ತ ನೆಟ್ಟಿಗರು ಪ್ರಥಮ್ ಅವರ ಕಾಲೆಳೆದಿದ್ದಾರೆ. ಭಾನುಶ್ರೀ ಅವರ ಜೊತೆಗೆ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ಫಸ್ಟ್ ನೈಟ್ ವಿತ್ ದೆವ್ವ(First night with devva) ಸಿನಿಮಾ ಸೆಟ್ಟೇರಿತ್ತು.


ಶೂಟಿಂಗ್ ಕೆಲಸಗಳ ಮಧ್ಯೆ ಬಿಡುವ ಮಾಡಿಕೊಂಡು ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ್ದಾರೆ. ಸಿನಿಮಾದ ಶೀರ್ಷಿಕೆಯ ಹಾಗೆ ಫಸ್ಟ್ ನೈಟ್ ವಿತ್ ದೆವ್ವ(First night with devva) ಅಂದ ಮೇಲೆ ಫಸ್ಟ್ ನೈಟ್ ಸೀನ್ಗಳು ಇದ್ದೇ ಇರುತ್ತದೆ. ಹಾಗಾಗಿ ಪ್ರಥಮ್ ಅವರು ಪ್ರಪ್ರಥಮ ಬಾರಿಗೆ ಇಂತಹ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಈ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ದೊರಕುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

Comments