ಸರ್ಕಾರಿ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಪಣತೊಟ್ಟಿದೆ.....!



ಯಲಹಂಕ: ಸರ್ಕಾರಿ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬೆಂಗಳೂರು ‌ನಗರ ಜಿಲ್ಲೆ ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಪಣತೊಟ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಮಧ್ಯಮ ಮತ್ತು ಬಡತನ ಹಿನ್ನಲೆಯ ಮಕ್ಕಳೇ ಹೆಚ್ಚಾಗಿ ಓದುವುದು..ಇಂತಹ ಸರ್ಕಾರಿ ಶಾಲಾ ಮಕ್ಕಳು ಯಾವುದೇ ಶೈಕ್ಷಣಿಕ ಮತ್ತು ಪಠ್ಯೇತರ ಸಾಧನ ಸಲಕರಣೆಗಳಿಂದ ವಂಚಿತರಾಗಬಾರದು..ಈ ದೃಷ್ಟಿಯಿಂದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯ್ತಿಯು ಸರ್ಕಾರಿ ಶಾಲಾ ಮಕ್ಕಳಿಗೆ ಯೂನಿಪಾರ್ಮ್, ಬ್ಯಾಗ್ಸ್, ವಿತರಿಸಿದೆ..




 ಯಲಹಂಕದ ಆಧುನಿಕ ಕೆಂಪೇಗೌಡ ಖ್ಯಾತಿಯ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು ಮತ್ತು ಸಿಂಗನಾಯಕನಹಳ್ಳಿ ಗ್ರಾಮಪಂಚಾಯ್ತಿಯ ಸದಸ್ಯರು ಸಿಂಗನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನೂರಾರು ಶಾಲಾ ಮಕ್ಕಳಿಗೆ ದುಬಾರಿ ಬೆಲೆಯ ಶೂಗಳನ್ನು ಖಾಸಗಿ ವಿದ್ಯಾಸಂಸ್ಥೆ ವಿತರಿಸಿತು.. ಸಿಂಗನಾಯಕನಹಳ್ಳಿಯ ವಿಶ್ವವಿದ್ಯಾಪೀಠ ಖಾಸಗಿ‌ ಶಾಲೆಯ ನಿರ್ದೇಶಕರಾದ ಶ್ರೀಮತಿ ಸುಶೀಲಾ ಸಂತೋಷ್ ರವರು ಕಾಸ್ಟ್ ಲಿ ಶೂಗಳನ್ನು ವಿತರಿಸಿದರು.. 



ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಮತ್ತು‌ ಖಾಸಗಿ ಶಾಲೆ ವಿಶ್ವವಿದ್ಯಾಪೀಠ ಸಂಸ್ಥೆಗಳ ಸ್ಪಂದನೆಗೆ ಶಾಸಕ ವಿಶ್ವನಾಥ್ ರವರು ಮತ್ತು ಗ್ರಾ.ಪಂ.ಉಪಾಧ್ಯಕ್ಷರಾದ ಪ್ರಶಾಂತ್ ರೆಡ್ಡಿರವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಸಿಂಗನಾಯಕನಹಳ್ಳಿ ಗ್ರಾ.ಪಂ ವತಿಯಿಂದ ‌ಕಸ ವಿತರಣೆ ಅನುಕೂಲಕ್ಕೆ ಕಸದ ಬಕೆಟ್ಸ್ ವಿತರಿಸಲಾಯ್ತು.



ಸಿಂಗನಾಯಕನಹಳ್ಳಿಯಾದ್ಯಂತ ಪಂಚಾಯ್ತಿ ಸದಸ್ಯರು ಕಸವಿಲೆವಾರಿ ಅನುಕೂಲಕ್ಕೆ ಜನರಿಗೆ ಬಕೆಟ್ಸ್ ವಿತರಿಸಿದರು.. ಸಾರ್ವಜನಿಕರು ಸಹ ಬಕೆಟ್ಸ್ ಪಡೆದು ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕವಾಗಿ‌ ಹಾಕಲು ನೆರವಾಗುವ ಬಕೆಟ್ಸ್ ಪಡೆದು ಧನ್ಯತೆ ಮೆರೆದರು..

Comments