ಕೈಕೊಟ್ಟ ಮಳೆ, ಬಾರದ ಬೆಳೆ, ಸಾಲದ ಭಯ ರೈತ ನೇಣಿಗೆ ಶರಣು...!*

 



ಗದಗ : ಸಾಲಕ್ಕೆ ಭಯಗೊಂಡು, ಬಾರದ ಮಳೆಯಿಂದ ಕಂಗಾಲಾಗಿ, ಒಣಗುತ್ತಿರುವ ಮೆಣಸಿನಕಾಯಿ, ಈರುಳ್ಳಿ ಬೆಳೆಗೆ ಬೇಸರಗೊಂಡು ಯುವ ರೈತ ತನ್ನ ಜಮೀನದ ಮರವೊಂದಕ್ಕೆ ನೇಣಿಗೆ ಶರಣಾದ ಘಟನೆ ಗದಗ ತಾಲೂಕಿನ ಹರ್ಲಾಪೂರ ಗ್ರಾಮದಲ್ಲಿ ನಡೆದಿದೆ. ಹರ್ಲಾಪೂರ ಗ್ರಾಮದ ಯುವ ರೈತ ಪರಸಪ್ಪ ರಾಮಪ್ಪ ಉಮಚಗಿ(ವಯಸ್ಸು 26) ಶುಕ್ರವಾರ ಬೆಳಗಿನ ಜಾವಾ ನೆಣಿಗೆ ಶರಣಾದ ದುರ್ದೈವಿ ಎಂಬುದು ತಿಳಿದು ಬಂದಿದೆ. ತಂದೆ ಮಾಡಿದ ಬ್ಯಾಂಕ್ ಸಾಲ 1.20 ಸಾವಿರ ರೂ. ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಿ ಸಾಲ ತೀರಿಸಿದ್ದಾನೆ. ಮರಳಿ ಸಾಲ ಕೇಳಿದ್ದಾನೆ, ಸಾಲ ಸಿಕ್ಕಿಲ್ಲ. ಇತ್ತ 2 ಎಕರೆ ಜಮೀನದಲ್ಲಿ ಬಿತ್ತಿದ ಮೆಣಸಿನಕಾಯಿ, ಈರುಳ್ಳಿ ಬೆಳೆ ಮಳೆ ಇಲ್ಲದೆ ಒಣಗವೆ. ಗುಂಪುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ.

ಇದನ್ನೂ ಓದಿ:ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ..!!

  ಮಳೆ ಇಲ್ಲ, ಬೆಳೆ ಇಲ್ಲ, ಬ್ಯಾಂಕದಿಂದ ಸಾಲ ಸಿಕ್ಕಿಲ್ಲ, ತಂದೆಯೂ ತೀರಿಕೊಂಡಿದ್ದರಿಂದ ಗುಂಪು ಸಾಲ ಮರಳಿಸಲು ಸಾಧ್ಯವಾಗದೆ, ಯಾವುದೇ ದಿಕ್ಕು ತೋಚದೆ ಭಯಗೊಂಡು ರೈತ ಪರಸಪ್ಪ ಉಮಚಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಚರ್ಚೆಗಳು ನಡೆದಿವೆ.

Comments