ಹೆಸರಘಟ್ಟದ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಕನ್ನಡ ಕ್ರಿಯಾ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯೋತ್ಸವ.

 


 ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಕನ್ನಡ ಕ್ರಿಯಾ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖ್ಯಾತ ಸಿನಿಮ ನಿರ್ದೇಶಕರು ಸಿನಿಮಾ ಸಾಹಿತಿಗಳು ಹಾಗೂ ಸಂಗೀತ ನಿರ್ದೇಶಕರಾದ ಶ್ರೀ ವಿ ಮನೋಹರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರಿಯಾ ಸಮಿತಿಯ ನೀಡುವ ಕನ್ನಡದ ಕಂಪು ಪ್ರಶಸ್ತಿಯನ್ನು ಸ್ವೀಕರಿಸಿದರು ಕನ್ನಡಕ್ಕಾಗಿ ಸಮಿತಿಯು ಕಳೆದ 33 ವರ್ಷಗಳಿಂದ ನೀಡಿರುವ ಕೊಡುಗೆಯನ್ನು ಸ್ಲಾಗಿಸಿದರು.


 ಸಂಸ್ಥೆಯ ಪ್ರಭಾರಿ ನಿರ್ದೇಶಕರಾದ ಡಾ. ಪ್ರಕಾಶ್ ಪಾಟೀಲ್ ರವರು ಅಧ್ಯಕ್ಷತೆ ವಹಿಸಿದ್ದರು ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ವಿ ಎಚ್ ಎಲ್ ಲಕ್ಷ್ಮಣ್ ಡಾಕ್ಟರ್ ಕಾರ್ಯದರ್ಶಿ ಡಾಕ್ಟರ್ ಏನ್ ಲೋಕೇಶ ಉಪಾಧ್ಯಕ್ಷ ಡಾಕ್ಟರ್ ಪಿ ನಂದೀಶ ಉಪ ಕಾರ್ಯದರ್ಶಿ ಡಾಕ್ಟರ್ ಓಂಕಾರ್ ನಾಯಕ್ ಹಾಗೂ ಕನ್ನಡ ಕ್ರಿಯಾ ಸಮಿತಿಯ ಇತರ ಕಾರ್ಯಕರ್ತರು ಮತ್ತು ಸಂಸ್ಥೆಯ ಸಿಬ್ಬಂದಿಗಳು ಬಹಳ ಹರ್ಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು




 ಈ ಸಮಯದಲ್ಲಿ ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು ಇದಲ್ಲದೆ ಮಧ್ಯಾಹ್ನ ರಾಜ್ಯ ಪ್ರಶಸ್ತಿ ವಿಜೇತ ನಾಗರತ್ನಮ್ಮ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

Comments