ದೊಡ್ಡಬಳ್ಳಾಪುರದಲ್ಲಿ ಕೊನೆಗೂ ಪಟಾಕಿ ಮಳಿಗೆಗಳು ಆರಂಭ ವಹಿವಾಟಿಲ್ಲದೆ ಕಂಗಾಲಾಗಿದ್ದ ವ್ಯಾಪಾರಿಗಳು ಕೇವಲ ನಾಲ್ಕು ದಿನಗಳ ವ್ಯಾಪಾರಕ್ಕೆ ಅವಕಾಶ.

 

ದೀಪಾವಳಿ ಹಬ್ಬ ಆಚರಣೆಗೆ ದಿನಗಣನೆ ಆರಂಭಗೊಂಡಿದ್ದು, ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆಯ ಗ್ರೀನ್ ವ್ಯಾಲಿ ಮುಂಭಾಗದ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಜಿಲ್ಲಾಡಳಿತದಿಂದ ಅನುಮತಿ ಸಿಗದೆ ಕಂಗಾಲಾಗಿದ್ದ ಪಟಾಕಿ ವ್ಯಾಪಾರಿಗಳಿಗೆ ಶನಿವಾರ ಸಂಜೆ ಅನುಮತಿ ಪತ್ರ ಕೈಸೇರಿದೆ. ಈ ಮೂಲಕ ಕೇವಲ ನಾಲ್ಕು ದಿನಗಳ ಕಾಲ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 


ನಗರದ ೮ ಮಳಿಗೆಗಳ ವರ್ತಕರು ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪೊಲೀಸರಿಂದ ಅನುಮತಿ ಪಡೆದು ಮಳಿಗೆ ನಿರ್ಮಿಸಿದ್ದಾರೆ. ಕೊಂಗಾಡಿಯಪ್ಪ ಕಾಲೇಜು ರಸ್ತೆ ಮೈದಾನದಲ್ಲಿ ಈಗಾಗಲೇ ೮ ಮಳಿಗೆಗಳನ್ನು ಹಾಕಿ ಪಟಾಕಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ಮಳಿಗೆದಾರರು ಅಗ್ನಿಶಾಮಕ ಇಲಾಖೆ, ನಗರಸಭೆ ಹಾಗೂ ಸೇಲ್ಸ್ ಟ್ಯಾಕ್ಸ್ ಡಿಪಾರ್ಟ್ ಮೆಂಟ್ ಸೇರಿ ೧೦ಕ್ಕೂ ಹೆಚ್ಚು ಇಲಾಖಾಗಳಿಂದ ನಿರಾಪೇಕ್ಷಣಾ ಪತ್ರಗಳನ್ನು ಪಡೆಯುವುದು ಕಡ್ಡಯವಾಗಿತ್ತು.


ಪಟಾಕಿ ವ್ಯಾಪಾರಿಗಳಾದ ಮೋಹನ್, ಮಹೇಶ್ ಬಾಬು, ರವಿಕುಮಾರ್ ಮಾತಾನಾಡಿ ನಾವು ಕಳೆದ ೫೦ ವರ್ಷಗಳಿಂದ ಪಟಾಕಿ ವ್ಯಾಪಾರಿ ಮಾಡಿಕೊಂಡು ಬಂದಿದ್ದೇವೆ. ಈ ವರ್ಷ ಸರ್ಕಾರದ ನಿಯಮಗಳು ಸಾಕಷ್ಟು ಇವೆ. ಪ್ರತಿಯೊಂದು ನಿಯಮಗಳನ್ನು ನಾವು ಅಳವಡಿಸಿಕೊಂಡು, ಪಾಲಿಸುತ್ತಿದ್ದೇವೆ. ವ್ಯಾಪಾರಕ್ಕೆ ಕಡಿಮೆ ದಿನಗಳ ಅವಕಾಶ ಇದ್ದು ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು. 



ಹಲವು ನಿಬಂಧನೆ: 

ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿ ಹಲವು ನಿಬಂಧನೆಗಳನ್ನು ಹೇರಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ. ಪಟಾಕಿ ಬಾಕ್ಸ್‌ಗಳ ಮೇಲೆ ಹಸಿರು ಚಿಹ್ನೆ ಮತ್ತು ಕ್ಯುಆರ್ ಕೋಡ್‌ ಕಡ್ಡಾಯವಾಗಿದೆ. ಹಸಿರು ಪಟಾಕಿ ಹೊರತುಪಡಿಸಿ ಉಳಿದ ದರ್ಜೆಯ ಪಟಾಕಿಗಳ ಮಾರಾಟಕ್ಕೆ ಮುಂದಾದಲ್ಲಿ ಅಂತಹ ಉತ್ಪನ್ನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದೆ. 10X10 ಅಡಿ ವಿಸ್ತೀರ್ಣದ, ಜಂಕ್‌ ಶೀಟ್‌ಗಳಿಂದ ನಿರ್ಮಿಸಿದ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಐದಕ್ಕೂ ಹೆಚ್ಚು ಮಳಿಗೆಗಳು ಇರುವ ಕಡೆಗಳಲ್ಲಿ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.




ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜು ರಸ್ಯೆಯ ಮೈದಾನದಲ್ಲಿ ಪಟಾಕಿ ಮಳಿಗೆ ತಯಾರಿಯಲ್ಲಿರುವ ಮಾಲೀಕರು. ವ್ಯಾಪಾರಿಗಳಾದ ಮಹೇಶ್ ಬಾಬು, ಉಮೇಶ್, ಮಹಮದ್ ಇಕ್ಬಾಲ್, ಅಯೂಬ್ ಪಾಷ, ಮಹೇಶ್ ಕುಮಾರ್, ರವಿಕುಮಾರ್, ಶಿವಕುಮಾರ್. ನವೀನ್ ಕುಮಾರ್ ಇದ್ದರು.

Comments