804ಜನ ಬಿಎಸ್ಎಫ್ ರೇಡಿಯೋ ಆಪರೇಟರ್ ಮುಖ್ಯ ಪೇದೆಗಳಿಗೆ BSF ಬೆಂಗಳೂರು ತರಬೇತಿ ಕೇಂದ್ರದ ಐ.ಜಿ ಜಾರ್ಜ್ ಮಂಜೂರನ್ ಪ್ರತಿಜ್ಞೆ ಬೋಧಿಸಿದರು..
ಬೆಂಗಳೂರಿನ ಯಲಹಂಕದ ಬಿಎಸ್ಎಫ್ ಕ್ಯಾಂಪಸ್ ನಲ್ಲಿ 804 ಜನ ಯೋಧರು ತರಭೇತಿ ಮುಗಿಸಿ ಸೇನಾ ಸೇವೆಗೆ ತೆರಳಲು ಸನ್ನದ್ದರಾಗಿದ್ದಾರೆ. ಯಲಹಂಕ ಏರ್ಪೋರ್ಟ್ ರಸ್ತೆಯ ಬಾಗಲೂರು ಕ್ರಾಸ್ ಸಮೀಪದ ಗಡಿಭದ್ರತಾ ಪಡೆಯ ಕ್ಯಾಂಪಸ್ ನ ಯೋಧರು ತರಭೇತಿ ಮುಗಿಸಿದ್ದಾರೆ.. ಬಿಎಸ್ಎಫ್ ನ STC ಅಧೀನ ಕೇಂದ್ರದಲ್ಲಿ 22ವಾರಗಳ ಕಠಿಣ ತರಭೇತಿ ಪಡೆಯಲಾಗಿದೆ.. 804ಜನ ಬಿಎಸ್ಎಫ್ ರೇಡಿಯೋ ಆಪರೇಟರ್ ಮುಖ್ಯ ಪೇದೆಗಳಿಗೆ ಬಿಸ್ಎಫ್ ಬೆಂಗಳೂರು ತರಬೇತಿ ಕೇಂದ್ರದ ಐ.ಜಿ ಜಾರ್ಜ್ ಮಂಜೂರನ್ ಪ್ರತಿಜ್ಞೆ ಬೋಧಿಸಿದರು..
ಕಾರ್ಯಕ್ರಮ ಉದ್ದೇಶಿಸಿ ಬಿಎಸ್ಎಫ್ ಯಲಹಂಕ ಕೇಂದ್ರದ ಐ.ಜಿ. ಜಾರ್ಜ್ ಮಂಜೂರನ್ ಮಾತನಾಡಿ ಈ ಕೇಂದ್ರದಲ್ಲಿ 22ವಾರಗಳ ಕಠಿಣ ತರಭೇತಿ ಪಡೆದು ಸೇವೆಗೆ ಸಿದ್ದರಾಗಿ ದೇಶದ ಮೂಲೆ ಮೂಲೆಗೆ ತೆರಳುತ್ತಿದ್ದಾರೆ.. ಗಡಿಭದ್ರತಾ ಪಡೆಯ ರೇಡಿಯೋ ಆಪರೇಟಿಂಗ್ ವಿಭಾಗದ ಸೇವೆಗೆ ಮುಖ್ಯ ಪೇದೆಗಳನ್ನು ಸಿದ್ಧಗೊಳಿಸಲಾಗಿದೆ.. ಈ ಅವಧಿಲಿ ಅವರಿಗೆ ಅತ್ಯಗತ್ಯ ತರಬೇತಿ ನೀಡಲಾಗಿದೆ.. ಸಂಹವನ ಕೇಂದ್ರದಲ್ಲಿ 40ವಾರಗಳ ಇನ್ನೂ ಹೆಚ್ಚಿನ ತರಬೇತಿಗಾಗಿ ಪ್ರತಿಜ್ಞೆ ಬೋಧಿಸಿ ಕಳಿಸಿಕೊಡಲಾಗುತ್ತಿದೆ ಎಂದರು..
Byte:- ಜಾರ್ಜ್ ಮಂಜೂರನ್, ಐ.ಜಿ. ಯಲಹಂಕ ಬಿಎಸ್ಎಫ್ ಕ್ಯಾಂಪಸ್..ಇದೇ ವೇಳೆ ಮಾತನಾಡಿದ ತರಭೇತಿ ಪೂರ್ಣಗೊಳಿಸಿದ ಯೋಧರು ತಮಗೆ ಬೆಂಬಲವಾಗಿ ನಿಂತ ಕುಟುಂಬ, ತರಭೇತಿ ನೀಡಿ ಬಿಎಸ್ಎಫ್ ನ ಹಿರಿಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು..
Byte:-ತರಭೇತಿ ಪಡೆದ ಯೋಧ..
Byte:-ತರಭೇತಿ ಪಡೆದ ಮಹಿಳಾ ಯೋಧೆ..
ಇದೇ ವೇಳೆ ಮುಖ್ಯ ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್. ಸಹಾಯಕ ಕಮಾಂಡೆಂಟ್ ರಜನಿಕಾಂತ್ ಸೇರಿದಂತೆ ಹಿರಿಯ ಅಧಿಕಾರ ವರ್ಗ ಉಪಸ್ಥಿತರಿದ್ದರು.. ತರಭೇತಿ ಪಡೆದ ಮಕ್ಕಳು ಪಥಸಂಚಲನದಲ್ಲಿ ಬಂದು ಪದಕ ಪಡೆದದ್ದು ರೋಮಾಂಚಕಾರಿಯಾಗಿತ್ತು.. ಇದೇ ವೇಳೆ ಯೋಧರ ಕುಟುಂಬಗಳ ಜನ ಭಾವಪರವಶರಾದರು.. ಅತ್ಯದ್ಭುತವಾಗಿದ್ದ ಕಾರ್ಯಕ್ರಮ ನೆರೆದಿದ್ದ ಸಾವಿರಾರು ಜನರನ್ನು ರಂಜಿಸಿತು..
Comments