
ಆ ರಸ್ತೆ ಸಿಲಿಕಾನ್ ಸಿಟಿಯ ಹೊರವಲಯದ ರಸ್ತೆ , ದಿನನಿತ್ಯ ಸಾವಿರಾರು ದೇಶಿ, ವಿದೇಶಿ ಪ್ರಯಾಣಿಕರು ಸಂಚಾರ ಮಾಡೋ ರಸ್ತೆ. ಈ ರಸ್ತೆ ಕಾಮಗಾರಿ ಪ್ರಾರಂಭ ಆಗಿ ಬರೋಬ್ಬರಿ 6 ವರ್ಷ ಆಗಿದೆ.ಆದ್ರೆ ಇಂದಿಗೂ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ ಇದ್ರಿಂದ ರೊಚ್ಚಿಗೆದ್ದ ಹತ್ತಾರು ಗ್ರಾಮಸ್ಥರು ಮಾಡಿದ್ದೇನು ನೋಡಿ..
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನದಿಂದ ದಿನಕ್ಕೆ ವೈಟ್ ಫೀಲ್ಡ್, ಬೂದಿಗೆರೆ ಕ್ರಾಸ್ , ಬೂದಿಗೆರೆ ಮಾರ್ಗವಾಗಿ ವಾಹನ ಸಂಚಾರ ಅಧಿಕವಾಗುತ್ತಿತ್ತು. ಈ ನಿಟ್ಟಿನಲ್ಲಿ ರಾಜ್ಯ ಹೆದ್ದಾರಿ 104 ರಲ್ಲಿ ಬೂದಿಗೆರೆ ಕ್ರಾಸ್ ನಿಂದ ಕೆಐಎಎಲ್ ಸಮೀಪದವರೆಗೆ ರಸ್ತೆ ಅಗಲೀಕರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಅಂದಿನ ಸರ್ಕಾರ ಕೆ ಆರ್ ಡಿ ಸಿ ಎಲ್ ಮೂಲಕ ಅಸ್ತು ಎಂದಿತ್ತು. ಈ ಹಿನ್ನೆಲೆಯಲ್ಲಿ 2018 ರಲ್ಲಿ ಈ ರಸ್ತೆ ಕಾಮಗಾರಿ ಪ್ರಾರಂಭ ಆಯಿತು ಅಂದಿನಿಂದ ಇಂದಿನ ವರೆಗೆ ರಸ್ತೆ ಕುಂಟುತ್ತಾ ಸಾಗುತ್ತಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿವೆ. ಈ ಕೆ ಆರ್ ಡಿ ಸಿ ಎಲ್ ನೀಡಿರುವ ಗುತ್ತಿಗೆದಾರರು ನಡೆಸುತ್ತಿರುವ ಮಂದಗತಿಯ ಕಾಮಗಾರಿ ಮತ್ತು ಕಳಪೆ ಕಾಮಗಾರಿಗೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ವಾಹನ ಸವಾರರು ಮತ್ತು ಬೂದಿಗೆರೆ ಗ್ರಾಮಸ್ಥರು ಇಂದು ಏರ್ಪೋರ್ಟ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬೈಟ್ : ಮೂರ್ತಿ, ಬೂದಿಗೆರೆ ಗ್ರಾಮಸ್ಥರು
ಬೈಟ್ : ಶ್ರೀನಾಥ್ ಗೌಡ, ಗ್ರಾಮಸ್ಥರು
ರಸ್ತೆ ಕಾಮಗಾರಿಗೆ ನಡೆಸಿರುವ ಜೆ.ಎಂ.ಸಿ ಮತ್ತು ಅಲೈನ್ಮೆಂಟ್ ವ್ಯತ್ಯಾಸ ಆಗಿ ರಸ್ತೆ ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿರುವ ರೈತರ ಜಮೀನುಗಳಿಗೂ ಪರಿಹಾರ ಸೂಕ್ತ ರೀತಿಯಲ್ಲಿ ದೊರಕಿಲ್ಲ. ಈ ಕೆ ಆರ್ ಡಿ ಸಿ ಎಲ್ ಮಾಡಿರುವ ನೂರೆಂಟು ತಪ್ಪುಗಳಿಗೆ ರೈತರು, ವಾಹನ ಸವಾರರು, ನೂರಾರು ಗ್ರಾಮಸ್ಥರಿಗೆ ದಿನನಿತ್ಯ ನರಕಯಾತನೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ಈ ಮಂದಗತಿಯ ಕಾಮಗಾರಿಯಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇನ್ನೂ ಈ ಬಗ್ಗೆ ಕೆ ಆರ್ ಡಿ ಸಿ ಎಲ್ ಅಧಿಕಾರಿಗಳನ್ನ ಕೇಳಿದ್ರೆ ಬೇಜವಾಬ್ದಾರಿತನ ಉತ್ತರ ನೀಡುತ್ತಾರೆ.ಸದ್ಯಕ್ಕೆ ಇಂದು ಶಾಂತಿಯುತ ಪ್ರತಿಭಟನೆ ನಡೆಸಿರುವ ಬೂದಿಗೆರೆ ಗ್ರಾಮಸ್ಥರು ಶೀಘ್ರವಾಗಿ ಕಾಮಗಾರಿ ಮುಕ್ತಾಯ ಮಾಡದೇ ಹೋದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಕೆ ಆರ್ ಡಿ ಸಿ ಎಲ್ ಅಧಿಕಾರಿಗಳು ತ್ವರಿತಗತಿಯ ಕಾಮಗಾರಿ ನಡೆಸಲು ಹದಿನೈದು ದಿನ ಸಮಯಾವಕಾಶ ತೆಗೆದುಕೊಂಡಿದ್ದಾರೆ.
ಬೈಟ್ : ಅಪ್ಸರ್ ನಮಾಜ್ , ಅಧಿಕಾರಿ
ಒಟ್ಟಾರೆ ದಿನನಿತ್ಯ ಸಾವಿರಾರು ದೇಶಿ ವಿದೇಶಿ ಪ್ರಯಾಣಿಕರು ಸಂಚಾರ ಮಾಡೋ ರಸ್ತೆ ಕಾಮಗಾರಿ ಈ ಸ್ಥಿತಿಗೆ ಹೋಗಿದ್ರಿಂದ ರಾಜ್ಯದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆ ಆರ್ ಡಿ ಸಿ ಎಲ್ ಕಳೆಯುತ್ತಿದೆ. ಅದೆಷ್ಟು ಬೇಗ ಏರ್ಪೋರ್ಟ್ ರಸ್ತೆ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
Comments