ಯಲಹಂಕದ ಜಿಕೆವಿಕೆ ಕೃಷಿಮೇಳ2023 ಸಿಎಂ ಮತ್ತು ಡಿಸಿಎಂ ರವರಿಂದ ಚಾಲನೆ..!

    

ಬೆಂಗಳೂರಿನ ಯಲಹಂಕದ ಕೃಷಿಮೇಳ ನೋಡುವುದೇ ಪರಮಾನಂದ..ನಾಲ್ಕು‌ದಿನದ ಕೃಷಿಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ.ಡಿಕೆ.ಶಿವಕುಮಾರ್ ಚಾಲನೆ ನೀಡಿದರು..ಸಿರಿಧಾನ್ಯ ಪ್ರದರ್ಶನ ಕಂಡ ಡಿಕೆಶಿ ಖುದ್ಧಾಗಿ ಸಿರಿಧಾನ್ಯ ಖರೀದಿಸಿದ್ದು ಮೊದಲ ದಿನ‌ದ ಹೈಲೈಟ್ ಎನ್ನಬಹುದು..ಹಾಗಾದರೆ ಜಿಕೆವಿಕೆ ಕೃಷಿಮೇಳದಲ್ಕಿ ಮೊದಲ ದಿನ ಏನೆಲ್ಲಾ ಆಯ್ತು ಗೊತ್ತಾ..?

 

   ಬೆಂಗಳೂರಿನ ಯಲಹಂಕದ‌ ಜಕ್ಕೂರಿನ‌ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಾಲ್ಕು ದಿನಗಳ ಕೃಷಿಮೇಳ ನಡೆಯುತ್ತಿದೆ.‌. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ.ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.. ಇದೇ ವೇಳೆ ಡಿ.ಕೆ.ಶಿವಕುಮಾರ್ ಜನರ ಜೊತೆ ಸಿರಿಧಾನ್ಯ ಮಳಿಗೆಗಳಿಗೆ ತೆರಳಿ ಮಾಹಿತಿ ಪಡೆದರು.. ಇದೇ ವೇಳೆ ಸಿರಿಧಾನ್ಯವನ್ನು ಸ್ವತಃ ಖರೀದಿಸಿ ಖುಷಿ ವ್ಯಕ್ತಪಡಿಸಿದರು.. ಇದೇ ವೇಳೆ ಸಿರಿಧಾನ್ಯ ಮಾರಾಟಗಾರರು ಸಹ ಸಿರಿಧಾನ್ಯ ಆರೋಗ್ಯಕ್ಕೆ ಉತ್ತಮ ಎಂದರು..

ರಾಜ್ಯ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸೇರಿ ಜಿಕೆವಿಕೆ ಕ್ಯಾಂಪಸ್ ರಾಜ್ಯ‌ಸರ್ಕಾರದ ಆಶ್ರಯದಡಿ   ಕೃಷಿಮೇಳ ಆಯೋಜಿಸುತ್ತಾ ಬರುತ್ತಿವೆ.. 2023ರ ಕೃಷಿಮೇಳಕ್ಕೆ ಮೊದಲ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಜನ ಎಂಬ ಮಾತು‌ಕೇಳಿ ಬರ್ತಿತ್ತು.. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಆಗುವ ಸಾಧ್ಯತೆಯೂ ಇದೆ.. ಈವೊತ್ತು ಕೃಷಿಕರಿಗಿಂತ ಹೆಚ್ಚು ಕಮರ್ಷಿಯಲ್ ಆಗಿ‌ ಕೃಷಿಮೇಳದ ಆಯೋಜಕರು ಗ.ನ ಹರಿಸಿದ್ದರು.. ನೈಜ ರೈತರಿಗೆ ಮಾಲ್ಸ್ ಸಿಕ್ಕಲ್ಲಿ ಎಂಬ ಆರೋಪವೂ ಕೇಳಿಬಂದಿದೆ. ಆದರೂ ಜನ ಜೊರಾಗಿ ಖರೀದಿಯಲ್ಲಿ ತೊಡಗಿ ಸಖತ್ ಆಗಿ ಎಂಜಾಯ್ ಮಾಡಿದರು.. ಕುಲಪತಿಗಳು ಮಾತನಾಡಿ ಜನ ಮತ್ತು ಕೃಷಿಕರ ತೃಪ್ತಿಪಡಿಸಿ‌ ಕಾರ್ಯಕ್ರಮ‌ ಯಶಸ್ವಿಗೊಳಿಸುವುದೇ ನಮ್ಮ ಉದ್ದೇಶ ಎಂದರು..






ಒಟ್ಟಾರೆ ಮೊದಲ ದಿನ ಕೃಷಿಮೇಳ ಸ್ವಲ್ಪ ಬಿಸಿಲು‌, ಸೂಕ್ತ ಸಮಯಕ್ಕೆ ಬಸ್ಗಳಿಲ್ಲ‌ ಮತ್ತು ಮದ್ಯಾಹ್ನದ ನಂತರ ಸ್ವಲ್ಪ ಸುಡುಬಿಸಿಲು ವೀಕ್ಷಕರನ್ನು ಖಾಡಿಸಿತು.. ಆದರೆ ಸಿರಿದಾನ್ಯ  ಮಳಿಗೆಗಳು ಸೇರಿ ಎಲ್ಲಾ ಸ್ಟಾಲ್ಗಳಲ್ಲಿ ಜನ‌ಕಿಕ್ಕಿರಿದು ಸೇರಿ‌‌ ಮಾರಾಟ ಜೋರಾಗಿತ್ತು ಎನ್ನಬಹುದು..


Comments