ಶಿಡ್ಲಘಟ್ಟ ತಾಲೂಕಿನಲ್ಲಿ ಅಂಬಾರಿ ಮಂಜುನಾಥ್ ಎಂದೇ ಹೆಸರು ಮಾಡಿದ ಶಿಡ್ಲಘಟ್ಟ ನಗರದ ಮಂಜುನಾಥ್
ಶಿಡ್ಲಘಟ್ಟ ನಗರದ ಜೋಗ್ ಪೇಟೆಯಲ್ಲಿ ವಾಸವಾಗಿರುವ ಮಂಜುನಾಥ್ ಅಲಿಯಾಸ್ ಅಂಬಾರಿ ಮಂಜುನಾಥ್ ರವರು ಹಲವಾರು ವರ್ಷಗಳಿಂದ ಶಿಡ್ಲಘಟ್ಟ ತಾಲೂಕು ಹಾಗೂ ಸುತ್ತಮುತ್ತಲಿನ ತಾಲೂಕುಗಳಿಗೆ ಸೈಕಲ್ ಗೆ ಅಂಬಾರಿಯ ಅಲಂಕಾರವನ್ನು ಮಾಡಿ ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಮಾರಂಭಗಳಲ್ಲಿ ತನ್ನ ಸೈಕಲ್ ಅಂಬಾರಿಗೆ ಅನೇಕ ಕವಿಗಳು ,ರಾಷ್ಟ್ರ ಕವಿಗಳು, ಭಾರತ ಮಾತೆ ,ತಾಯಿ ಭುವನೇಶ್ವರಿ ಭಾವಚಿತ್ರವನ್ನು ಹಾಕಿ, ಅಂಬಾರಿಯಲ್ಲಿ ಪಲ್ಲಕ್ಕಿ ಮಾಡಿ ಕನ್ನಡ ಗೀತೆಗಳನ್ನು ಹಾಕಿಕೊಂಡು ಅಂಬಾರಿಯನ್ನು ಅನೇಕ ತಾಲೂಕುಗಳಿಗೆ ಹೋಗಿ ಅವರ ಅಭಿಮಾನವನ್ನು ತೋರಿಸಿರುತ್ತಾರೆ.
ಹಲವಾರು ವರ್ಷಗಳಿಂದ ಇವರ ಸೇವೆಯನ್ನು ಯಾವ ಸಂಘಟನೆಗಳೇ ಆಗಲಿ ಯಾವ ತಾಲೂಕು ಆಡಳಿತ, ಜಿಲ್ಲಾಡಳಿತವಾಗಲಿ ಇವರನ್ನು ಗುರುತಿಸುವಂತ ಪ್ರಯತ್ನವೇ ಮಾಡಿಲ್ಲ.
ಇವರು ಕೂಲಿ ಮಾಡಿ ಕಷ್ಟಪಟ್ಟಂತ ಸ್ವಂತ ಹಣದಿಂದ ಇವರು ಪಲ್ಲಕ್ಕಿಯನ್ನು ಮಾಡಿ ಶಿಡ್ಲಘಟ್ಟದಿಂದ , ಚಿಂತಾಮಣಿ ,ವಿಜಯಪುರ, ಹೊಸಕೋಟೆ, ಬಂಗಾರಪೇಟೆ ,ದೇವನಹಳ್ಳಿ ,ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಇನ್ನು ಮುಂತಾದ ತಾಲೂಕಿಗೆ ತನ್ನ ಅಂಬಾರಿಗೆ ಪಲ್ಲಕ್ಕಿಯನ್ನು ಕಟ್ಟಿಕೊಂಡು ಹೋಗುತ್ತಾರೆ.
ನಾನು ಸುಮಾರು ವರ್ಷಗಳಿಂದ ನನ್ನ ಸೈಕಲ್ ಗೆ ನಾಡ ಹಬ್ಬದ ವಿಶೇಷತೆಯನ್ನು ಸಾರಲು ಅಲಂಕರಿಸುತ್ತೇನೆ. ಸುಮಾರು ಎರಡು-ಮೂರು ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಇದನ್ನ ನನ್ನ ಕೂಲಿಯ ಹಣದಿಂದಲೇ ತಯಾರಿಸುತ್ತೇನೆ. ಇನ್ನು ನನಗೆ ಯಾವುದೇ ರೀತಿಯ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ನಗರ ಸಭೆಗೆ ಎಷ್ಟು ಬಾರಿ ನಿವೇಶನಕ್ಕಾಗಿ ಅರ್ಜಿ ಹಾಕಿದರೂ ಸಹ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ನಗರಸಭೆ ಆಗಲಿ, ತಾಲೂಕು ಆಡಳಿತವಾಗಲಿ ನಿವೇಶನವನ್ನು ಕಲ್ಪಿಸಿಕೊಡುವ ಭರವಸೆಯಲ್ಲೇ ಇದ್ದಿನಿ ಎಂದರು.
ವರದಿ ನಂದಿ ರಾಜೇಶ್ ಶಿಡ್ಲಘಟ್ಟ
Comments