ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಮಹಿಳಾ ಚೆಸ್ ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕಿ ಜಯಶ್ರೀ

 


ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ತುಮಕೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜನೆ‌ ಮಾಡಲಾಗಿತ್ತು. ಈ ಕ್ರೀಡಾಕೂಟದಲ್ಲಿ ಮಹಿಳಾ ಚೆಸ್ ವಿಭಾಗದಲ್ಲಿ ಉತ್ತಮವಾಗಿ ತಮ್ಮ ಆಟದ ಕೌಶಲ್ಯ ಪ್ರದರ್ಶನ ಮಾಡುವ ಮೂಲಕ ಗೆದ್ದು ಬೀಗಿದ ತಾಲ್ಲೂಕಿನ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಜಯಶ್ರೀ ಅಭೂತಪೂರ್ವ ಗೆಲವು ದಾಖಲಿಸುದರ ಮೂಲಕ

ರಾಷ್ಟ್ರಮಟ್ಟದ ಮಹಿಳಾ ಚೆಸ್ ವಿಭಾಗಕ್ಕೆ ಆಯ್ಕೆ ಆಗಿ  ಗೋವಾದಲ್ಲಿ ನಡೆಯುವ ರಾಷ್ಟ್ರ‌ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.



ಜಯಶ್ರೀ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನ‌ ಸಾಸಲು ಹೋಬಳಿಯ‌ ಲಿಂಗದವೀರನಹಳ್ಳಿ ಮಜರಾ ಪುಟ್ಟಲಿಂಗಯ್ಯನಪಾಳ್ಯದವರಾಗಿದ್ದು ,ದೊಡ್ಡಬಳ್ಳಾಪುರ ನಗರದ ಅರಳುಮಲ್ಲಿಗೆ ಬಾಗಿಲು ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



ರಾಷ್ಟ್ರಮಟ್ಟದ ಚೆಸ್ ವಿಭಾಗಕ್ಕೆ ಆಯ್ಕೆಯಾದ ಶಿಕ್ಷಕಿ ಜಯಶ್ರೀ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಶಂಸನಾ ಪತ್ರ ನೀಡುವ ಮೂಲಕ ಅಭಿನಂದಿಸಿದರು.




ಅದೇ ರೀತಿ ತಾಲೂಕಿನ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘವೂ ಸಹ ಅಭಿನಂದನೆ ಸಲ್ಲಿಸಿ ರಾಷ್ಟ್ರಮಟ್ಟದಲ್ಲೂ ವಿಜಯಶಾಲಿಯಾಗಲೆಂದು ಶುಭ ಹಾರೈಸಿದ್ದಾರೆ.

ವರದಿ ಶಿವರಾಜ್ ಸಾರಥಿ ಟಿವಿ ನ್ಯೂಸ್ ದೊಡ್ಡಬಳ್ಳಾಪುರ

Comments