ಹೊಲದಲ್ಲಿ ಉಳುಮೆ ಮಾಡುವಾಗ ಸಿಕ್ತು ಕೊಳೆತು ನಾರುತ್ತಿದ್ದ ಅಪರಿಚಿತ ಶವ, ಕೊಲೆ ಸಂಶ

 ನೆಲಮಂಗಲ: ಟ್ರ್ಯಾಕ್ಟರ್ ನಲ್ಲಿ ಹೊಲವನ್ನ ಉಳುಮೆ ಮಾಡುವ ಸಮಯದಲ್ಲಿ ಟ್ರ್ಯಾಕ್ಟರ್ ನೇಗಿಲಿಗೆ ಅಪರಿಚಿತ ಶವ ಸಿಕ್ಕಿದೆ, ದುಶ್ಕರ್ಮಿಗಳು ಕೊಲೆ ಮಾಡಿ ಸಾಕ್ಷ್ಯ ನಾಶಕ್ಕೆ ಈ ರೀತಿ ಮಾಡಿರುವ ಸಂಶಯ ವ್ಯಕ್ತವಾಗಿದೆ.

ನೆಲಮಂಗಲ ತಾಲ್ಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ ನಿನ್ನೆ ಘಟನೆಯ ನಡೆದಿದ್ದು, ಅನುಸೂಯಮ್ಮನವರ ತೋಟದಲ್ಲಿ ಹರೀಶ್ ಎಂಬುವರು ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುವಾಗ ಶವ ಪತ್ತೆಯಾಗಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಸ್ಥಳ ಪರಿಶೀಲನೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 


 ಶವ ಸಂಪೂರ್ಣವಾಗಿ ಕೊಳೆತ ರೀತಿಯಲ್ಲಿದ್ದು ವಾಸನೆಯಿಂದ ಕೂಡಿದೆ ಗುರುತಿಸಲು ಕಷ್ಟಕರವಾಗಿದ್ದು ಸುಮಾರು 45 ರಿಂದ 50 ವರ್ಷದ ವ್ಯಕ್ತಿಯ ಶವವಾಗಿದ್ದು ಮೂರ್ನಾಲ್ಕು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಅಥವಾ ಕೊಲೆ ಮಾಡಿ ಶವವನ್ನು ಇಲ್ಲಿ ಎಸೆದು ಹೋಗಿರಬಹುದು ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ಮತ್ತು ತಂಡ ಪರಿಶೀಲನೆ ನಡೆಸಿದ್ದು ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿದ್ದಾರೆ

ಘಟನೆಗೆ ಸಂಬಂಧಿಸಿದಂತೆ ಅನುಮಾನಸ್ಪದ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Comments