ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು, ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಧಾರುಣ ಸಾವು

 

ತುಮಕೂರು : ಕುಟುಂಬ ಸಭೇತ ಧರ್ಮಸ್ಥಳಕ್ಕೆ ಹೊರಟ್ಟಿದ್ದವರು ಅವರೇಲ್ಲ. ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಬಿದ್ದಿದೆ, ಕಾರಿನಲ್ಲಿ ಸಿಲುಕಿ ಹೊರಗೆ ಬರಲಾರದೆ ಮಾವ, ಅತ್ತೆ, ಪತ್ನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಾರೆ ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ರಾಮಲಿಂಗಪುರ ಕೆರೆ ಏರಿಯ ಮೇಲೆ ಘಟನೆ ನಡೆದಿದ್ದು, ಘಟನೆಯಲ್ಲಿ ದೊಡ್ಡಣ್ಣ, ಸಣ್ಣಮ್ಮ, ಯಮುನಾ ಮೃತ ದುರ್ದೈವಿಗಳು. ಪ್ರವೀಣ್ ಪ್ರಾಣಪಾಯದಿಂದ ಪಾರಾಗಿದ್ದಾನೆ.




ಮೃತರು ಶಿರಾ ತಾಲ್ಲೂಕಿನ ವೀರಾಪುರ ಗ್ರಾಮದವರು, ಪ್ರವೀಣ್ ಪತ್ನಿ ಯಮುನಾ, ಮಾವ ದೊಡ್ಡ ಣ್ಣ, ಅತ್ತೆ ಸಣ್ಣಮ್ಮ ರೊಂದಿಗೆ ಮಾರುತಿ ಅಲ್ಟೋ ಕಾರಿನಲ್ಲಿ ವೀರಾಪುರದಿಂದ ಧರ್ಮಸ್ಥಳಕ್ಕೆ ಪ್ರವಾಸ ಹೊರಟ್ಟಿದ್ರು, ಈ ವೇಳೆ ದುರ್ಘಟನೆ ನಡೆದಿದೆ. ಶಿರಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.


Comments