ಅವರು ಅಯೋಗ್ಯರಲ್ಲ,ಮುಟ್ಟಾಳರು..!? ನಗರಸಭೆ ಸದಸ್ಯರ ದುಂಡಾವರ್ತನೆಗೆ ಅಕ್ರೋಶ ವ್ಯಕ್ತಪಡಿಸಿದ ಅರ್ಕಾವತಿ ನದಿ ಹೋರಾಟ ಸಮಿತಿ
ದೊಡ್ಡಬಳ್ಳಾಪುರ : ನಗರಸಭೆ ಸದಸ್ಯರನ್ನ ಅಯೋಗ್ಯರು ಎಂದು ಕರೆದ ಗಿರೀಶ್ ಬೆಂಬಲಕ್ಕೆ ಅರ್ಕಾವತಿ ನದಿ ಹೋರಾಟ ಸಮಿತಿ ನಿಂತಿದೆ, ಗಿರೀಶ್ ರವರು ಬಳಸಿದ ಅಯೋಗರು ಪದ ಕಡಿಮೆ ಅವರೇಲ್ಲ ಮುಟ್ಟಾಳರೆಂದು ರೈತ ಮುಖಂಡ ವಸಂತ್ ಅಕ್ರೋಶ ವ್ಯಕ್ತಪಡಿಸಿದರು
ಆಕ್ಟೋಬರ್ 19ರಂದು ದೊಡ್ಡಬಳ್ಳಾಪುರ ನಗರಸಭೆ ಅವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯನ್ನ ಕರೆಯಲಾಗಿತ್ತು, ಸಭೆಯಲ್ಲಿ ಭಾಗಿಯಾಗಿದ್ದ ಪರಿಸರವಾದಿ ಗಿರೀಶ್ ರವರು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷ್ಯತೆಗೆ ಬೇಸತ್ತು ಅಯೋಗ್ಯರು ಎಂದು ಪದ ಪ್ರಯೋಗ ಮಾಡಿದರು, ಇದರಿಂದ ಕೆರಳಿದ ನಗರಸಭಾ ಸದಸ್ಯರು ಗಿರೀಶ್ ರನ್ನ ತರಾಟೆಗೆ ತೆಗೆದುಕೊಂಡರು. ಗಿರೀಶ್ ಪದ ಪ್ರಯೋಗದ ಅಯೋಗ್ಯರು ಪದ ಸ್ಥಳೀಯವಾಗಿ ಟ್ರೆಂಡ್ ಆಗಿದೆ.
ಗಿರೀಶ್ ಪದ ಪ್ರಯೋಗದ ಅಯೋಗ್ಯರು ಸಂಬಂಧಿಸಿದಂತೆ ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನ ನಡೆಸಿದರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ವಸಂತ್ ಗಿರೀಶ್ ವಿರುದ್ಧ ಮುಗಿಬಿದ್ದ ನಗರಸಭಾ ಸದಸ್ಯರ ದುಂಡಾವರ್ತನೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ನಮ್ಮ 47 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಅಯೋಗ್ಯರು ಯಾರೆಂದು ಗೊತ್ತಾಗುತ್ತದೆ.
ಕುಂದುಕೊರತೆ ಸಭೆಯಲ್ಲಿ ನಮ್ಮ ನೋವು ಹೇಳಿಕೋಳ್ಳುವುದು ತಪ್ಪಾ, ಗಿರೀಶ್ ರವರ ನೋವು ಅರ್ಥ ಮಾಡಿಕೊಳ್ಳದೆ ನಗರಸಭೆ ಸದಸ್ಯರು ದುಂಡಾವರ್ತನೆ ತೋರಿದ್ದಾರೆ, ಅಯೋಗ್ಯರು ಎನ್ನುವ ಪದ ಸಾಲದು, ಅವರನ್ನ ಮುಟ್ಟಾಳರು ಅನ್ನಬೇಕು. ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ರೆ ಮಾಹಿತಿ ಕಳೆದು ಹೋಗಿದೆ ಅಂತ್ತಾರೆ. , ಇವರು ಅಯೋಗ್ಯರು ಅಲ್ಲವೇ..? ಸಂವಿಧಾನದಲ್ಲಿ ಕಾಲು ಮೇಲೆ ಕಾಲು ಹಾಕಿ ಕುಳಿತು ಕೊಳ್ಳಬಾರದೆಂದು ಎಲ್ಲಿ ಹೇಳಿದೆ, ಕಡತಗಳು ಕೆಳಗೆ ಬಿಳುತ್ತೆ ಎಂಬ ಕಾರಣಕ್ಕೆ ಗಿರೀಶ್ ಕಾಲು ಮೇಲೆ ಕಾಲಾಕೊಂಡು ಹಾಕಿ ಕುಳಿದ್ದಾರೆ. ಗಿರೀಶ್ ಸಿಕ್ಕಿರೋದು ನಮ್ಮ ತಾಲೂಕಿಗೆ ಪುಣ್ಯ, ಅವರ ಬಳಿ ನಗರಸಭಾ ಸದಸ್ಯರು ಕ್ಷಮೆ ಕೇಳ ಬೇಕು.ಯಾವ ಬೆದರಿಕೆಗೂ ಬಗ್ಗ ಬೇಡಿ, ನಿಮ್ಮ ಪರವಾಗಿ 15 ಹಳ್ಳಿಗಳ ಜನರಿದ್ದಾರೆಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ವಿಜಯಕುಮಾರ, ಸತೀಶ್, ರಮೇಶ್ , ಕಾಳೇಗೌಡ ಇದ್ದರು.
Comments