ಚೀನಾ ದೇಶದ ಬಿಧಾಯಿನಲ್ಲಿ ನಡೆದ 19 ನೇ ಏಷಿಯಾ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ಜೂನಿಯರ್ ಮಹಿಳಾ ತಂಡ ಕಂಚನ್ನು ಪಡೆಯುವುದರ ಮೂಲಕ ದೇಶದ ಕೀರ್ತಿ ಪಾತಕೆಯನ್ನು ಹಾರಿಸಿದೆ.
ಅಕ್ಟೋಬರ್ 22 ರಿಂದ 28 ರವರೆಗೂ ನಡೆದ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ 11ಅಟಗಾರರೊಂದಿಗೆ ಭಾರತೀಯ ತಂಡ ಚೀನಾ ದಲ್ಲಿ ಪಾಲ್ಗೊಂಡು ಏಷ್ಯಾದ ವಿವಿಧ ದೇಶಗಳೊಂದಿಗೆ ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ 3 ನೇ ಸ್ಥಾನವನ್ನು ಪಡೆದು ಕಂಚನ್ನು ತಮ್ಮದಾಗಿಸಿಕೊಂಡರು.
ಕಂಚಿನ ಪದಕನ್ನು ಪಡೆದು ತಾಯ್ನಾಡಿಗೆ ಮರಲಿದ ಮಹಿಳಾ ತಂಡಕ್ಕೆ ಕರ್ನಾಟಕ ರೊಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೊರಿ ಸನ್ಮಾನಿಸಲಾಯಿತು.
ಸತತ 5 ವರ್ಷಗಳ ಪರಿಶ್ರಮದ ಫಲವಾಗಿ ಭಾರತಕ್ಕೆ ಕಂಚಿನ ಪಧಕ ಬಂದಿದ್ದು ಮುಂದಿನ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಪದಕವನ್ನು ಗೆಲ್ಲುವ ಗುರಿ ಹೊಂದಿರುವುದಾಗಿ ಭಾರತೀಯ ತಂಡದ ಮ್ಯಾನೇಜರ್ ಪ್ರಕಾಶ್ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರೊಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಇಂದುದರ್ ಸೀತಾರಾಮ್, ಹಾಕಿ ಕೋಚ್ ಅರ್ಜುನ್ ಬುಪಾಲ್, ಸ್ಪೀಡ್ ಕೋಚ್ ರವೀಶ್ ರಾವ್ ಸೇರಿದಂತೆ ಅಟಗಾರರು ಹಾಗೂ ಪೋಷಕರು ಉಪಸ್ಥಿತರಿದ್ದರು.
Comments