ಹೊಸಕೋಟೆ ನಗರದಲ್ಲಿ ಬೆಳ್ಳಂ ಬೆಳಿಗ್ಗೆಯೇ ತೆರವು ಕಾರ್ಯಾಚರಣೆ ಅರಣ್ಯ ಇಲಾಖೆಯ ಜಾಗವನ್ನ ಒತ್ತುವರಿ ಮಾಡಿದ 14 ಅಂಗಡಿಗಳ ತೆರವು
ಹೊಸಕೋಟೆ : ನಗರದಲ್ಲಿ ಬೆಳ್ಳಂ ಬೆಳಗ್ಗೆಯೇ ಜೆಸಿಬಿಗಳು ಕಾರ್ಯಾಚರಣೆ ನಡೆಸಿದವು, ಅರಣ್ಯ ಇಲಾಖೆಯ ಜಾಗ ಮತ್ತು ಪಾದಚಾರಿ ಮಾರ್ಗವನ್ನ ಒತ್ತುವರಿ ಮಾಡಿಕೊಂಡಿದ್ದ 14 ಅಂಗಡಿಗಳ ತೆರವು ಕಾರ್ಯ ಮಾಡಲಾಗಿದೆ.
ಹೊಸಕೋಟೆ ನಗರದ ಕೆಇಬಿ ವೃತ್ತದಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದವು, ಹೈಕೋರ್ಟ್ ಆದೇಶದ ನಂತರ ಪೊಲೀಸ್ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು 14 ಕ್ಕೂ ಹೆಚ್ಚಿನ ಅಂಗಡಿಗಳ ತೆರವು ಮಾಡಿದ್ದರು.
ತೆರವು ಕಾರ್ಯಚರಣೆಗೆ ವ್ಯಾಪಾರಿಗಳು ಅಕ್ರೋಶ ವ್ಯಕ್ತ ಪಡಿಸಿದರು, ಕೋರ್ಟ್ ಕೇಸ್ ನಲ್ಲಿ ನಾವು ಅಟೆಂಡ್ ಆಗಿಲ್ಲ, ಆ ಕಾರಣಕ್ಕೆ ನೋಟಿಸ್ ಬಂದಿದ್ದು, ನೋಟಿಸ್ ಗೆ ಉತ್ತರ ಕೊಡಲು 7 ದಿನಗಳ ಅವಕಾಶ ಇರುವಾಗ ಅಧಿಕಾರಿಗಳು ಇಂದು ಏಕಾಏಕಿ ಬಂದು ಕಾರ್ಯಚರಣೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಅಸ್ತಿ ಹಾಳು ಮಾಡಿದ್ದಾರೆ, ಅರಣ್ಯ ಇಲಾಖೆಗೆ ಸೇರ ಬೇಕಿದ್ದು ಕೇವಲ2 ಎಕರೆ ಮಾತ್ರ ಆದರೆ 4 ಎಕರೆ ತಮಗೆ ಸೇರಿದ್ದು ಎಂದು ತೆರವು ಮಾಡಿದ್ದಾರೆ, ವೈಯಕ್ತಿಕ ಕಾರಣ ಇಟ್ಟುಕೊಂಡು ಅರಣ್ಯಾಧಿಕಾರಿಗಳು ತೆರವು ಕಾರ್ಯಚಾರಣೆ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ತಮ್ಮ ಅಕ್ರೋಶ ವ್ಯಕ್ತ ಪಡಿಸಿದರು.
ಜಾಹೀರಾತು
Comments