ದೇವಾಲಯಕ್ಕೆ ತೆರಳಿದ ಒಂದೇ ಕುಟುಂಬದ ಮೂರು ಜನ ಶವವಾಗಿದ್ದು ಹೇಗೆ.....ಈ ಸುದ್ದಿ ನೋಡಿ...

ದೇವರ ಪ್ರಸಾದ ಸೇವಿಸಿ ಕೈ ತೊಳೆಯಲು ಹೋಗಿ ಕೃಷಿ ಹೊಂಡಾಗೆ ಬಿದ್ದ ಮಗಳು ಮಗಳನ್ನು ರಕ್ಷಿಸಲು ಹೋದ ಪೋಷಕರು...

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಒಂದೇ ಕುಟುಂಬದ ಮೂರು ಜನ ದೇವಾಲಯಕ್ಕೆ ತೆರಳಿದ್ದರು. ದೇವಾಲಯದಲ್ಲಿ ಅವರ ಕಷ್ಟ ಪರಿಹಾರಕ್ಕಾಗಿ ದೇವರ ಜಾತ್ರೆಗೆ ಹೋಗಿದ್ದರು ಭಕ್ತಿಯಿಂದ ಪ್ರಸಾದ ಸೇವಿಸಿದ್ದರು. ನಂತರ ಕೈ ತೊಳೆಯಲು ಕೃಷಿ ಹೊಂಡದ ಬಳಿ ತೆರಳಿ ಕೃಷಿ ಹೊಂಡ ಗೆ ಕಾಲು ಜಾರಿ ಬಿದ್ದ ಮಗಳು ಮಗಳನ್ನು ರಕ್ಷಿಸಲು ಹೋದ ತಂದೆ ತಾಯಿ ಸೇರಿ ಮೂರು ಜನರು ಜಲಸಮಾಧಿಯಾಗಿದ್ದಾರೆ


ಮರಿಯಪ್ಪ (70)ಮುನಿಯಮ್ಮ (60) ಮತ್ತು ಭಾರತಿ (40) ಮೃತ ದುರ್ದೈವಿಗಳು.




ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.


 


ಅಗ್ನಿಶಾಮಕ ಸಿಬ್ಬಂದಿ ಮತ್ತು ಅಲ್ಲಿದ್ದಂತಹ ಸ್ಥಳೀಯರು ಮತ್ತು ದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ.


ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

Comments